ನಿಗದಿಯಂತೆ ಐಒಸಿ ಸಭೆ
ನವದೆಹಲಿ: ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ (ಐಒಎ) ವಿವಾದಕ್ಕೆ ಸಂಬಂಧಿಸಿದಂತೆ ಭಾರತದ ಅಧಿಕಾರಿಗಳು ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಅಸೋಸಿಯೇಷನ್ ನಡುವೆ ನಡೆಲಿರುವ ಮಹತ್ವದ ಲಾವುಸನ್ನೆ ಸಭೆ ನಿಗದಿಯಂತೆ ನಡೆಯಲಿದೆ.
ಐಒಎ ಅಧ್ಯಕ್ಷ ವಿಕೆ ಮಲ್ಹೋತ್ರಾ ಮತ್ತು ಐಒಸಿ ಸದಸ್ಯ ರಣ್ಧೀರ್ ಸಿಂಗ್ ಮೇ 15ರಂದು ನಡೆಯಲಿರುವ ಸಭೆಯಲ್ಲಿ ಭಗಾವಹಿಸುವುದಿಲ್ಲ ಎಂದು ಹೇಳಿದ ನಂತರ ಸಭೆ ನಡೆಯುವ ಬಗ್ಗೆ ಗೊಂದಲ ಉಂಟಾಗಿತ್ತು. ಆದರೆ, ನಿಗದಿಯಂತೆ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಹೀಗಾಗಿ ಲಾವೂಸನ್ನೆಲೆಯಲ್ಲಿ ನಡೆಯಲಿರುವ ಸಭೆಗೆ ಆಗಮಿಸಲಿರುವ ಪ್ರತಿನಿಧಿಗಳಿಗೆ ಈಗಾಗಲೇ ವೀಸಾ ನೀಡಲು ಸ್ವಿಸ್ ರಾಯಭಾರಿ ಕಚೇರಿಗೆ ಐಒಸಿ ಸಂದೇಶ ಕಳುಹಿಸಿದೆ.