ಭೂಪತಿ- ಬೋಪಣ್ಣ ಕ್ವಾರ್ಟರ್‌ಫೈನಲ್‌ಗೆ
ಮ್ಯಾಡ್ರಿಡ್: ಭಾರತದ ಹಿರಿಯ ಟೆನಿಸ್ ತಾರೆ ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ ಜೋಡಿ ಮ್ಯಾಡ್ರಿಡ್ ಓಪನ್ ಪುರುಷರ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ. ಆದರೆ, ಲಿಯಾಂಡರ್ ಪೇಸ್ ಮತ್ತು ಸಾನಿಯಾ ಮಿರ್ಜಾ ಅವರು ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ. 6ನೇ ಶ್ರೇಯಾಂಕ ಪಡೆದಿರುವ ಭೂಪತಿ ಮತ್ತು ಬೋಪಣ್ಣ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸುವ ಮುನ್ನ ನಡೆದ ಪಂದ್ಯದಲ್ಲಿ ಅರ್ಜೆಂಟೀನಾದ ಜೂವಾನ್ ಮೋನಾಕೊ ಮತ್ತು ಹೋರಾಸಿಯೋ ಜೆಬಾಲ್ಲೋಸ್ ಜೋಡಿಯನ್ನು 6-3, 3-6, 10-5 ಸೆಟ್‌ಗಳ ಅಂತರದಿಂದ ಸೋಲಿಸಿತು. ಈ ಪಂದ್ಯಾವಳಿಯನ್ನು ಫ್ರೆಂಚ್ ಓಪನ್ ಅಭ್ಯಾಸವೆಂದೇ ಭಾವಿಸಲಾಗಿದೆ. ಆದರೆ, ಭಾರತದ ಇನ್ನೊಬ್ಬ ಹಿರಿಯ ಟೆನಿಸ್ ತಾರೆ ಲಿಯಾಂಡರ್ ಪೇಸ್ ಮತ್ತು ಆಸ್ಟ್ರೇಲಿಯಾದ ಜರ್ಗನ್ ಮೆಲ್ಜರ್ ಜೋಡಿಗೆ ನಿರಾಸೆದಾಯಕ ದಿನವಾಗಿತ್ತು. ಭಾರತ- ಆಸ್ಟ್ರೇಲಿಯಾ ಜೋಡಿ ಜರ್ಮನಿ ಮತ್ತು ಜೆಕ್ ಜೋಡಿಯನ್ನು 7-5, 6-1 ನೇರ ಸೆಟ್‌ಗಳ ಅಂತರದಿಂದ ಪರಾಭವಗೊಳಿಸಿತು. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ 5ನೇ ಸೀಡ್ ಪಡೆದಿದ್ದ ಸಾನಿಯಾ ಮತ್ತು ಬೇಥನೀ ಮಾಟೆಕ್ ಸ್ಯಾಂಡ್ಸ್ ಜೋಡಿ, ರಷ್ಯಾದ ಅನಾಸ್ತಾಸಿಯಾ ಪವ್ಲುಚೆಕೋವಾ ಮತ್ತು ಲೂಸಿಯಾ ಸಫಾರೋವ್ ಜೋಡಿ ವಿರುದ್ಧ 7-5, 6-1 ನೇರ ಸೆಟ್‌ಗಳ ಅಂತರದಿಂದ ಸೋಲನುಭವಿಸಿದರು.