ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಉತ್ತರ ಪ್ರದೇಶಕ್ಕೆ ಜಯ

Mainashree
Updated On : 11 May 2013, 11:05 am

ಬೆಂಗಳೂರು: ಶನಿವಾರ ನಡೆದ ಮತ್ತೊಂದು ಲೀಗ್ ಪಂದ್ಯದಲ್ಲಿ, ಉತ್ತರ ಪ್ರದೇಶ ತಂಡ, ಪಂಜಾಬ್ ವಿರುದ್ಧ 1-0 ಅಂತರದ ಜಯ ಸಾಧಿಸಿತು. ಪಂದ್ಯದ 28ನೇ ನಿಮಿಷದಲ್ಲಿ ಉತ್ತರ ಪ್ರದೇಶ ತಂಡದ ಪ್ರೇಮ್ ಕುಮಾರ್ ಅವರು ಗೋಲು ಗಳಿಸಿ, ತಮ್ಮ ತಂಡಕ್ಕೆ 1-0 ಅಂತರದ ಮುನ್ನಡೆ ತಂದುಕೊಟ್ಟರು. ಆದರೆ, ಎದುರಾಳಿ ತಂಡದಿಂದ ಯಾವುದೇ ಗೋಲು ದಾಖಲಾಗಲಿಲ್ಲ. ಮೊದಲಾರ್ಧದವರೆಗೂ ಇದೇ ಅಂತರವನ್ನು ಎರಡೂ ತಂಡಗಳು ಕಾಯ್ದುಕೊಂಡರು. ಆದರೆ, ದ್ವಿತೀಯಾರ್ಧದಲ್ಲೂ ಪಂಜಾಬ್ ತಂಡದ ಆಟಗಾರರ ಕೆಚ್ಚೆದೆಯ ಆಟವನ್ನು ಪ್ರದರ್ಶಿಸಲಿಲ್ಲ. ಹಾಗಾಗಿ, ಅಂತಿಮವಾಗಿ, ಪಂಜಾಬ್, ಉತ್ತರ ಪ್ರದೇಶದ ವಿರುದ್ಧ 1-0 ಅಂತರದಲ್ಲಿ ತಲೆಬಾಗಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement