ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕರ್ನಾಟಕಕ್ಕೆ 'ಮಣಿ'ಪುರ

Mainashree
Updated On : 11 May 2013, 11:04 am

ಬೆಂಗಳೂರು: ಈ ಬಾರಿಯ ರಂಗಸ್ವಾಮಿ ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ತಾನು ಸ್ಪರ್ಧಿಸಿದ್ದ ಮೊದಲೆರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡು, ಗೆಲವಿಗಾಗಿ ಕಾತರಿಸುತ್ತಿದ್ದ ಕರ್ನಾಟಕ ಹಾಕಿ ತಂಡ, ಶನಿವಾರ ನಡೆದ ತನ್ನ ಮೂರನೇ ಪಂದ್ಯದಲ್ಲಿ ಪಂಜಾಬ್ ವಿರುದ್ಧ 4-1 ಅಂತರದ ಜಯ ಸಾಧಿಸಿತು. ಈ ಮೂಲಕ ಕರ್ನಾಟಕ ಇದುವರೆಗೂ ಆಡಿರುವ ಮೂರು ಪಂದ್ಯಗಳಿಂದ ಒಟ್ಟು 4 ಅಂಕಗಳನ್ನು ತನ್ನದಾಗಿಸಿಕೊಂಡಿದೆ.
ಪಂದ್ಯದ ಆರಂಭದಿಂದಲೂ ಬಿರುಸಾಗಿ ಆಡಿದ ಕರ್ನಾಟಕದ ಆಟಗಾರರು, ಮೊದಲ ನಿಮಿಷದಲ್ಲೇ ಒಂದು ಗೋಲು ಗಳಿಸಿ, ಎದುರಾಳಿಗಳಿಗಿಂತ 1-0 ಮುನ್ನಡೆ ಪಡೆದುಕೊಂಡರು. ಈ ಮೊದಲ ಗೋಲು ಬಂದಿದ್ದು, ಕರ್ನಾಟಕ ತಂಡದ ನಾಯಕ ದೀಪಕ್ ಬೆಜವಾಡ್. ಅತ್ತ, ಪಂಜಾಬ್ ಕೂಡಾ ಹಿಂದೆ ಬೀಳಲಿಲ್ಲ. ಪಂದ್ಯದ 7ನೇ ನಿಮಿಷದಲ್ಲಿ ಸ್ಟಾರನ್ ಅವರು ಮತ್ತೊಂದು ಗೋಲು ಗಳಿಸಿ, ಕರ್ನಾಟಕದ ವಿರುದ್ಧ ಪಂಜಾಬ್ ಸಮಬಲ ಸಾಧಿಸಲು ನೆರವಾದರು.
ಇದಾಗಿ, ಮೂರೇ ನಿಮಿಷಗಳ ಅಂತರದಲ್ಲಿ (ಪಂದ್ಯದ 10ನೇ ನಿಮಿಷ) ಕರ್ನಾಟಕ ಮತ್ತೊಂದು ಗೋಲು ಗಳಿಸಿತು. ಈ ಗೋಲು ಬಿಜು ಯಿರ್ಕಲ್ ಅವರು ಗಳಿಸಿದರು. ಇದರಿಂದ ಕರ್ನಾಟಕ ತಂಡ 2-1 ಅಂತರದ ಮುನ್ನಡೆಯನ್ನು ಕಂಡುಕೊಂಡಿತು.
ಆನಂತರ, 20ನೇ ನಿಮಿಷದಲ್ಲಿ ನಾಯಕ ದೀಪಕ್ ಬೆಜವಾಡ್ ಮತ್ತೊಂದು ಗೋಲು ಗಳಿಸುವ ಮೂಲಕ ತಮ್ಮ ತಂಡಕ್ಕೆ 3-1 ಅಂತರದ ಮುನ್ನಡೆಯನ್ನು ಒದಗಿಸಿಕೊಟ್ಟರು. ಹೀಗೆ, ತ್ವರಿತವಾಗಿ ಗಳಿಸಿದ ಗೋಲುಗಳ ಸಹಾಯದಿಂದ ಕರ್ನಾಟಕ ತಂಡ, ಪ್ರವಾಸಿಗಳ ವಿರುದ್ಧ ಪಂದ್ಯದ ಮೊದಲಾರ್ಧ ಮುಗಿಯುವ ಹೊತ್ತಿಗೆ 3-1 ಅಂತರದ ಮುನ್ನಡೆಯನ್ನೇ ಕಾಯ್ದುಕೊಂಡಿತು.
ಇನ್ನು, ದ್ವಿತೀಯಾರ್ಧ ಶುರುವಾದಾಗ, ಉತ್ತರ ಪ್ರದೇಶದ ಆಟಗಾರರು ಕೊಂಚ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರು. ಆದರೆ, ಅವರ ಆಟವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದ ಕರ್ನಾಟಕದ ಆಟಗಾರರು ಎದುರಾಳಿಗಳಿಗೆ ಚಿಗುರಲು ಯಾವುದೇ ಅವಕಾಶ ನೀಡಲಿಲ್ಲ.
ಹೀಗೇ, ಪೈಪೋಟಿಯಿಂದ ಸಾಗುತ್ತಿದ್ದ ಪಂದ್ಯದ 37ನೇ ನಿಮಿಷದಲ್ಲಿ ಕರ್ನಾಟಕದ ನವೀನ್ ಕುಮಾರ್ ಅವರು ತಮ್ಮ ತಂಡಕ್ಕೆ ನಾಲ್ಕನೇ ಗೋಲ್ ಬಾರಿಸಿಕೊಟ್ಟರು. ಇದರಿಂದ, ಕರ್ನಾಟಕ 4-1ರ ಅಂತರವನ್ನು ಕಂಡುಕೊಂಡಿತು.
ಪಂದ್ಯ ಮುಗಿಯುವವರೆಗೂ ಇದೇ ಅಂತರವನ್ನು ಕಾಯ್ದುಕೊಂಡ ಕರ್ನಾಟಕ ಅಂತಿಮವಾಗಿ, ಪಂದ್ಯದಲ್ಲೂ ಜಯಭೇರಿ ಬಾರಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement