ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಚೆಸ್: ಆನಂದ್‌ಗೆ ಗೆಲವು

Mainashree
Updated On : 11 May 2013, 11:06 am

ಸ್ಯಾಂಡ್ನೆಸ್: ಪಂದ್ಯಾವಳಿಯ ಆರಂಭದಲ್ಲೇ ಗೆಲವಿನ ಲಯಕ್ಕೆ ಮರಳಿರುವ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್, ಇಲ್ಲಿ ನಡೆಯುತ್ತಿರುವ ನಾರ್ವೆ ಚೆಸ್ ಸೂಪರ್ 2013 ಪಂದ್ಯಾವಳಿಯ ಮೂರನೇ ಸುತ್ತಿನಲ್ಲಿ ಜಯ ಸಾಧಿಸಿದ್ದಾರೆ. ಬಲ್ಗೇರಿಯಾದ ವೆಸೆಲಿನ್ ಟೊಪಲೋವ್ ಅವರ ವಿರುದ್ಧ ಸೆಣೆಸಾಡಿದ ಆನಂದ್,  ಜಂಟಿ 2ನೇ ಸ್ಥಾನದಲ್ಲಿದ್ದಾರೆ. ಇನ್ನು ರಷ್ಯಾದ ಸರ್ಗೆ ಕರ್ಜಕಿನ್ ತಮ್ಮ ಎದುರಾಳಿ ಚೀನಾದ ವಾಂಗ್ ಹೂ ವಿರುದ್ಧ ಜಯ ಸಾಧಿಸುವ ಮೂಲಕ ಪಂದ್ಯಾವಳಿಯಲ್ಲಿ ಸತತ 3ನೇ ಗೆಲವು ದಾಖಲಿಸಿದ್ದಾರೆ. ಈ ಮೂಲಕ ಪಂದ್ಯಾವಳಿಯಲ್ಲಿ 3 ಅಂಕಗಳನ್ನು ಗಳಿಸಿರುವ ಕರ್ಜಕಿನ್ ಅಗ್ರಸ್ಥಾನದಲ್ಲಿದ್ದು, ನಂತರದ ಸ್ಥಾನದಲ್ಲಿ ಲೆವೊನ್ ಅರೋನಿಯನ್ ಹಾಗೂ ಆನಂದ್ 2 ಅಂಕಗಳಿಸುವ ಮೂಲಕ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement