ಜಾರ್ಖಂಡ್ ವಿರುದ್ಧ ಮುಂಬೈಗೆ ಗೆಲವು
ಬೆಂಗಳೂರು: ಶನಿವಾರ ನಡೆದ ಮೂರನೇ ಪಂದ್ಯದಲ್ಲಿ ಮುಂಬೈ ತಂಡ, ಜಾರ್ಖಂಡ್ ತಂಡವನ್ನು 7-5 ಗೋಲುಗಳ ಅಂತರದಿಂದ ಪರಾಭವಗೊಳಿಸಿತು. ಆರಂಭದಿಂದಲೂ ತೀವ್ರ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ, ಮುಂಬೈ ತಂಡದ ರೋಷನ್ ಕೀರನ್ ಅವರು ಆರಂಭದ 8ನೇ ನಿಮಿಷದಲ್ಲಿ ಹಾಗೂ 27ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ರವಿ ಪರೀಕ್ ಹಾಗೂ 11ನೇ ಹಾಗೂ 59ನೇ ನಿಮಿಷದಲ್ಲಿ ಎರಡು ಗೋಲು ಗಳಿಸಿಕೊಟ್ಟರು. ನಂತರ, ವಿಕ್ಟೊ ಸಿಂಗ್ ಅವರು 45ನೇ ಹಾಗೂ 60ನೇ ನಿಮಿಷದಲ್ಲಿ ಮತ್ತೆರಡು ಗೋಲು ದಾಖಲಿಸಿದರು. ಇನ್ನುಳಿದ ಒಂದು ಗೋಲು ಪಂದ್ಯದ 56ನೇ ನಿಮಿಷದಲ್ಲಿ ಲಕ್ಷ್ಮಣ್ ಅವರಿಂದ ದಾಖಲಾಯಿತು. ಅತ್ತ, ಜಾರ್ಖಂಡ್ ಪರವಾಗಿ, ಜಾನ್ ಮಿಂಜ್ ಅವರು ಪಂದ್ಯದ 10ನೇ ನಿಮಿಷದಲ್ಲಿ ಗೋಲು ದಾಖಲಿಸಿ, ಗೋಲ್ನ ಖಾತೆ ತೆರೆದುಕೊಟ್ಟರೆ, ನಂತರ, 13ನೇ ನಿಮಿಷದಲ್ಲಿ ದಿಲ್ದಾರ್ ತೊಪ್ಪಾ ಅವರು ಮತ್ತೊಂದು ಗೋಲು ದಾಖಲಿಸಿದರು. ಆನಂತರ, ಪಂದ್ಯದ 17ನೇ, 23ನೇ ಹಾಗೂ 68ನೇ ನಿಮಿಷಗಳಲ್ಲಿ ದೀಪಕ್ ಸೊರೆಂಗ್ ಅವರು ಗೋಲು ದಾಖಲಿಸಿದರು.