ಬ್ಯಾಡ್ಮಿಂಟನ್: ಪಿಂಟೊ, ಅನ್ವಿತಾ ಸೆಮಿಫೈನಲ್ಗೆ
ಮಣಿಪಾಲ: ಇಲ್ಲಿನ ಮಣಿಪಾಲ್ ಬ್ಯಾಡ್ಮಿಂಟನ್ ಕ್ಲಬ್ ಆಶ್ರಯದಲ್ಲಿ ಶನಿವಾರ 12ನೇ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ಗೆ ಚಾಲನೆ ದೊರೆಯಿತು.
ಆರಂಭದ ದಿನ ನಡೆದ 14 ವರ್ಷದೊಳಗಿನ ಬಾಲಕಿಯರ ಪಂದ್ಯಾಟದಲ್ಲಿ ಉಡುಪಿಯ ಗ್ಲಾನ್ಸಿಯಾ ಪಿಂಟೋ ಮತ್ತು ಮಂಗಳೂರಿನ ಅನ್ವಿತಾ ಶೆಟ್ಟಿ ಸೆಮಿಫೈನಲ್ ಹಂತ ತಲುಪಿದ್ದಾರೆ.
ಅದೇ ರೀತಿ 13 ವರ್ಷದೊಳಗಿನ ಬಾಲಕರ ಪಂದ್ಯಾವಳಿಯಲ್ಲಿ ಬೆಳಗಾವಿಯ ತೇಜಸ್ ಕಲ್ಲೊಲ್ಕರ್ ಮತ್ತು ಅದೇ ಜಿಲ್ಲೆಯ ಅಜಿಂಕ್ಯಾ ಜೋಷಿಯೂ ಸೆಮಿಫೈನಲ್ ಹಂತಕ್ಕೆ ತಲುಪಿದ್ದಾರೆ.
ಉದ್ಘಾಟನೆ: ಪಂದ್ಯಾವಳಿಯನ್ನು ಸಿಂಡಿಕೇಟ್ ಬ್ಯಾಂಕ್ ಮಹಾಪ್ರಬಂಧಕ ಎಸ್. ಬಾಲಕೃಷ್ಣನ್ ಉದ್ಘಾಟಿಸಿದರು. ಮಣಿಪಾಲ ಪ್ರೆಸ್ನ ಆಡಳಿತ ನಿರ್ದೇಶಕ ಟಿ. ಗೌತಮ ಪೈ, ಸಿಂಡಿಕೇಟ್ ಬ್ಯಾಂಕ್ನ ಸಹಾಯಕ ಮಹಾಪ್ರಬಂಧಕ ಪ್ರದೀಪ್ ಕೆ. ಸಕ್ಸೇನಾ ಮತ್ತು ಅನಿಲ್ ಕುಮಾರ್ ಅರ್ಗಲ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.