ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ಗೆ ತೆರಳಿದ ಭಾರತ
ನವದೆಹಲಿ: ರಾಜಧಾನಿಯಲ್ಲಿ ನಡೆದ ಕಾಮನ್ವೆಲ್ತ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ದಾಖಲೆಯ ಪ್ರದರ್ಶನ ನೀಡಿದ 9 ಸದಸ್ಯರ ಭಾರತ ತಂಡ, ವಿಶ್ವ ಚಾಂಪಿಯ್‌ಷಿಪ್‌ನಲ್ಲಿ ಭಾಗವಹಿಸಲು ಪ್ಯಾರೀಸ್‌ಗೆ ತೆರಳಿತು. ಸೋಮವಾರದಿಂದ ಪಂದ್ಯಾವಳಿ ಆರಂಭವಾಗಲಿದ್ದು, ಭಾರತದ 5 ಪುರುಷರು ಮತ್ತು ನಾಲ್ವರು ವನಿತೆಯರು ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಪುರುಷರ ತಂಡದ ಮುದಾಳತ್ವವನ್ನು ಅಚಂತಾ ಶರತ್ ಕಮಲ್ ವಹಿಸಿಕೊಂಡಿದ್ದರೆ, ಮೌಮಾ ದಾಸ್ ವನಿತೆಯರ ತಂಡದ ಮುಂದಾಳತ್ವ ವಹಿಸಲಿದ್ದಾರೆ. ಮಹಿಳೆಯರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಕೆ. ಶ್ಯಾಮಿನಿ ಸಹ ತಂಡಲ್ಲಿದ್ದಾರೆ. ಕಾನ್ವೆಲ್ತ್‌ನಲ್ಲಿ 2 ಬೆಳ್ಳಿ ಮತ್ತು ಏಳು ಕಂಚಿನ ಪದಕ ಗೆಲ್ಲುವ ಮೂಲಕ ಇದೇ ಮೊದಲ ಬಾರಿಗೆ ಶ್ರೇಷ್ಠ ಪ್ರದರ್ಶನ ನೀಡಿದ ಭಾರತ ತಂಡ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದೆ.
ತಂಡ: ಅಚಂತ ಶರತ್ ಕಮಲ್, ಸೌಮ್ಯಜೀತ್ ಘೋಷ್, ಅಂಥೋನಿ ಅಮಲ್‌ರಾಜ್, ಸನಲ್ ಶೆಟ್ಟಿ, ಹರ್ಮೀತ್ ದೇಸಾಯಿ. ವನಿತೆಯರ ತಂಡ: ಮೌಮಾ ದಾಸ್, ಕೆ. ಶ್ಯಾಮಿನಿ, ಮಾಧುರಿಕಾ ಪಾಟ್ಕರ್, ನೆಹಾ ಅಗರ್ವಾಲ್.