ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಪಂಜಾಬ್, ಮುಂಬೈ ತಂಡಗಳಿಗೆ ಗೆಲವು

Mainashree
Updated On : 13 May 2013, 12:32 pm

ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ 64ನೇ ರಂಗಸ್ವಾಮಿ ರಾಷ್ಟ್ರೀಯ ಹಾಕಿ ಪಂದ್ಯಾವಳಿ ಹಿನ್ನೆಲೆಯಲ್ಲಿ, ಭಾನುವಾರ ನಡೆದ ಪಂದ್ಯಗಳಲ್ಲಿ ಪಂಜಾಬ್ ಹಾಗೂ ಉತ್ತರ ಪ್ರದೇಶ ಜಯಗಳಿಸಿದ್ದಾರೆ.
ಪಂಜಾಬ್‌ಗೆ ಜಯ: ಪಂಜಾಬ್ ಹಾಗೂ ಮಣಿಪುರ ನಡುವೆ ನಡೆದ ಮೊದಲ ಪಂದ್ಯದಲ್ಲಿ, ಪಂಜಾಬ್ ತಂಡ ಮಣಿಪುರವನ್ನು 9-3 ಗೋಲುಗಳ ಭಾರೀ ಅಂತರದಲ್ಲಿ ಜಯಗಳಿಸಿತು.
ಪಂದ್ಯದ ಆರಂಭದಲ್ಲಿ, ಸಿಮರಂಜಿತ್ ಸಿಂಗ್ ಅವರು, ಪಂದ್ಯದ 13ನೇ ನಿಮಿಷದಲ್ಲೇ ಗೋಲು ಬಾರಿಸಿ, ತಮ್ಮ ತಂಡಕ್ಕೆ ಮೊದಲ ಗೋಲಿನ ಉಡುಗೊರೆಯನ್ನು ತಂದಿತ್ತರು. ಇದಾದ ನಂತರ, 17ನೇ ನಿಮಿಷದಲ್ಲಿ ಸಿಮರಾಂಜಿತ್ ಸಿಂಗ್ ಅವರು, ಎರಡನೇ ಗೋಲನ್ನು ತಂದುಕೊಟ್ಟರು.
ಆನಂತರ, ಪಂದ್ಯದ 22ನೇ ನಿಮಿಷದಲ್ಲಿ ಸಂಜೀವ್ ಕುಮಾರ್ ಅವರು ತಂಡಕ್ಕೆ ಮೂರನೇ ಗೋಲು ಬಾರಿಸಿದರೆ, ಸಾತ್ವಿಂದರ್ ಸಿಂಗ್ ಅವರು 37ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿಕೊಟ್ಟರು. ಇದರಿಂದ, ಪಂಜಾಬ್ ಎದುರಾಳಿಗಳ ವಿರುದ್ಧ 4-0 ಅಂತರದ ಮುನ್ನಡೆ ಪಡೆದುಕೊಂಡಿತು. ಆನಂತರ, ರಂಜಿತ್ ಸಿಂಗ್ ಅವರು 43ನೇ ನಿಮಿಷ ಹಾಗೂ 49ನೇ ನಿಮಿಷಗಳಲ್ಲಿ ಗೋಲು ಗಳಿಸಿ, ತಂಡಕ್ಕೆ 6-0 ಅಂತರದ ಮುನ್ನಡೆಯನ್ನು ತಂದುಕೊಟ್ಟರು.
ಈ ಸಂದರ್ಭದಲ್ಲಿ, ಸಿಮರಾಂಜಿತ್ ಸಿಂಗ್ ಅವರೂ 58ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದರು. ಆನಂತರ, ರಂಜಿತ್ ಸಿಂಗ್ ಅವರು 62ನೇ ನಿಮಿಷದಲ್ಲಿ ಹಾಗೂ ಸಿಮರಾಂಜಿತ್ ಸಿಂಗ್ ಅವರನ್ನು 64ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಪಂಜಾಬ್ 9 ಗೋಲುಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿತು.
ಪಂಜಾಬ್‌ನ ಈ ಆಕ್ರಮಣಕಾರಿ ಆಟದೆದುರು ಮಂಕಾದ ಮಣಿಪುರ, ಕೇವಲ 3 ಗೋಲುಗಳಿಗಷ್ಟೇ ತೃಪ್ತಿಪಡಬೇಕಾಯ್ತು.
ಎನ್. ಭಾಸ್ಕರ್ ಅವರು ಪಂದ್ಯದ 26ನೇ ನಿಮಿಷದಲ್ಲಿ ಬಾರಿಸಿದ ಗೋಲು ಆ ತಂಡಕ್ಕೆ ಮೊದಲ ಗೋಲು ಆದರೆ, ಪ್ರಿಯೊಂಕ್ ಕುಮಾರ್ ಅವರು 36ನೇ ನಿಮಿಷದಲ್ಲಿ ಗಳಿಸಿದ ಗೋಲು ಎರಡನೇ ಗೋಲು ಆಗಿ ಖಾತೆ ಜಮೆಯಾಯಿತು. ಇನ್ನು, ಬಾಸ್ಕರ್ ಅವರೇ 54ನೇ ನಿಮಿಷದಲ್ಲಿ ಗೋಲು ಗಳಿಸಿದರು. ಇದರಿಂದ ಮೂರು ಗೋಲುಗಳು ಮಣಿಪುರಕ್ಕೆ ಲಭಿಸಿದಂತಾಯ್ತು. ಆದರೆ, ಪಂಜಾಬ್‌ನ ನಿರಂತರ ಆಕ್ರಮಣದೆದುರು ಮತ್ಯಾವ ಗೋಲೂ ದಾಖಲಿಸದ ಮಣಿಪುರ, ಪಂದ್ಯದಲ್ಲಿ 9-3 ಗೋಲುಗಳ ಭಾರೀ ಅಂತರದಲ್ಲಿ ಪಂಬಾಜ್ ವಿರುದ್ಧ ಶರಣಾಯಿತು.
ಮುಂಬೈಗೆ ಗೆಲವು: ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಮುಂಬೈ ಹಾಗೂ ಉತ್ತರ ಪ್ರದೇಶ ತಂಡಗಳು ಮುಖಾಮುಖಿಯಾಗಿದ್ದವು. ಮುಂಬೈ ತಂಡ 3 ಗೋಲು ಗಳಿಸಿದರೆ, ಉತ್ತರ ಪ್ರದೇಶ ತಂಡ ಯಾವುದೇ ಗೋಲು ದಾಖಲಿಸಲಿಲ್ಲ. ಮುಂಬೈ ಪರವಾಗಿ, ಲಕ್ಷ್ಮಣ್ ರಾವ್ (43ನೇ ನಿಮಿಷ), ಜಯಂತಾ ಮೈಟೈ (64ನೇ ನಿಮಿಷ) ಹಾಗೂ ಓವನ್ ಗೋಲ್ (61ನೇ ನಿಮಿಷ) ಗೋಲು ಗಳಿಸಿ, ತಂಡದ ಜಯಕ್ಕೆ ಕಾರಣರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement