ಪಾರ್ಥೀವ್ ಪ್ರದರ್ಶನ ಮೆಚ್ಚಿದ ಮೂಡಿ
ಮೊಹಾಲಿ: ಪಂಜಾಬ್ ವಿರುದ್ಧ ಪ್ರಬುದ್ಧ ಬ್ಯಾಟಿಂಗ್ ನಡೆಸಿದ ಪಾರ್ಥೀವ್ ಪಟೇಲ್ ಅವರ ಪ್ರದರ್ಶನಕ್ಕೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಕೋಚ್ ಟಾಮ್ ಮೂಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪಾರ್ಥೀವ್ ಈ ಪಂದ್ಯದಲ್ಲಿ ಉತ್ತಮ ಇನಿಂಗ್ಸ್ ಕಟ್ಟಿದ್ದು ಅವರ ಪ್ರದರ್ಶನ ತಂಡಕ್ಕೆ ನೆರವಾಗಿದೆ. ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದಾಗಿ ನಾವು ನಮ್ಮ ಗುರಿ ಮುಟ್ಟಿದೆವು ಎಂದು ಮೂಡಿ ತಿಳಿಸಿದರು.
ನಮ್ಮ ತಂಡ ಪಂದ್ಯಾವಳಿಯಲ್ಲಿ ಪ್ಲೇ ಆಫ್ ಹಂತವನ್ನು ತಲುಪಲು ಕಡಿಮೆ ಅವಕಾಶಗಳಿದ್ದು, ಈ ವೇಳೆ ಈ ರೀತಿಯಾದಂತಹ ಜವಾಬ್ದಾರಿಯುತ ಪ್ರದರ್ಶನ ತಂಡಕ್ಕೆ ನೆರವಾಗಲಿದೆ ಎಂದು ಮೂಡಿ ತಿಳಿಸಿದರು.
ನಾವು ನಮ್ಮ ಜಯದ ಲಯವನ್ನು ಮುಂದುವರಿಸಲು ಅಗತ್ಯವಾದ ಪ್ರದಶಂನ ನೀಡುತ್ತೇವೆ ಎಂದು ತಿಳಿಸಿದರು.
ಪಂದ್ಯಾವಳಿಯ ಈ ಹಂತದಲ್ಲಿ ನಮ್ಮ ತಂಡದ ಬ್ಯಾಟಿಂಗ್ ವಿಭಾಗ ಉತ್ತಮ ಪ್ರದರ್ಶನ ನೀಡುತ್ತಿರುವುದು ತಂಡಕ್ಕೆ ಧನಾತ್ಮಕ ವಿಷಯವಾಗಿದೆ. ಅಲ್ಲದೇ ನಮ್ಮ ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದು, ಫೀಲ್ಡಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದೆವು. ಇದೇ ರೀತಿಯ ಪ್ರದರ್ಶನವನ್ನು ಮುಂದಿನ ದಿನಗಳಲ್ಲೂ ಮುಂದುವರಿಸುತ್ತೇವೆ ಎಂದು ಹೇಳಿದರು.