ರಾಯಲ್ಸ್‌ಗೆ ಸಿಎಸ್‌ಕೆ ಸಾಧಾರಣ ಸವಾಲು
ಜೈಪುರ: ಗೆಲವಿನ ನಾಗಾಲೋಟದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೈಕ್ ಹಸ್ಸಿ ಹಾಗೂ ವಿಜಯ್ ಅವರ ಉತ್ತಮ ಬ್ಯಾಟಿಂಗ್‌ನಿಂದಾಗಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ 142 ರನ್‌ಗಳ ಗುರಿ ನೀಡಿದೆ.
ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹಾಗಾಗಿ ಮೊದಲು ಬ್ಯಾಟಿಂಗ್ ನಡೆಸಿದ ಸಿಎಸ್‌ಕೆ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 141 ರನ್ ಗಳಿಸಿತು.
ತಂಡಕ್ಕೆ ಉತ್ತಮ ಆರಂಭ ನೀಡಿದ ಆರಂಭಿಕರಾದ ಮೈಕ್ ಹಸ್ಸಿ (41) ಹಾಗೂ ಮುರಳಿ ವಿಜಯ್ () ಮೊದಲ ವಿಕೆಟ್‌ಗೆ 83 ರನ್ ಜತೆಯಾಟ ನೀಡಿದರು. ಆದರೆ 11.3ನೇ ಓವರ್‌ನಲ್ಲಿ ಬಿನ್ನಿ ಎಸೆತದಲ್ಲಿ ಹಸ್ಸಿ ಬೌಲ್ಡ್ ಆಗುವ ಮೂಲಕ ಈ ಜೋಡಿ ಬೋರ್ಪಟ್ಟಿತು. ನಂತರ ಸಿಎಸ್‌ಕೆ ದಿಢೀರ್ ಕುಸಿತ ಕಂಡಿತು.
ನಂತರ ಬಂದ ರೈನಾ ಕೇವಲ 1 ರನ್‌ಗಳಿಸಿ ಕೂಪರ್ ಎಸೆತದಲ್ಲಿ ಸ್ಯಾಮ್ಸನ್‌ಗೆ ಕ್ಯಾಚ್ ನೀಡಿದರು. ನಂತರ ಬಂದ ಧೋನಿ ಅದೇ ಓವರ್‌ನಲ್ಲಿ ವ್ಯಾಟ್ಸನ್‌ಗೆ ಕ್ಯಾಚ್ ನೀಡಿ ಕೇವಲ 2 ರನ್‌ಗಳಿಸಿ ಔಟಾದರು.
ನಂತರ ಬಂದ ಜಡೇಜಾ, ವಿಜಯ್ ಜತೆಗೂಡಿ 24 ರನ್‌ಗಳ ಜತೆಯಾಟವಾಡಿದರು. ನಂತರ 55 ರನ್‌ಗಳಿಸಿದ್ದ ವಿಜಯ್ ರನೌಟ್ ಆಗುವ ಮೂಲಕ ಪೆವಿಲಿಯನ್ ಸೇರಿಕೊಂಡರು.
ನಂತರ ಅಜೇಯರಾಗಿ ಉಳಿದ ಜಡೇಜಾ (12), ಬ್ರಾವೊ (23), ರನ್‌ಗಳಿಸಿ ತಂಡ 140ರ ಗಡಿ ದಾಟಲು ನೆರವಾದರು.
ಸ್ಕೋರ್ ಬೋರ್ಡ್
ಸಿಎಸ್‌ಕೆ: 141/4 (20 ಓವರ್)
ಹಸ್ಸಿ ಬಿ ಬಿನ್ನಿ 41(40), ವಿಜಯ್ ರನೌಟ್ (ಯಾಗ್ನಿಕ್) 55(50), ರೈನಾ ಸಿ ಸ್ಯಾಮ್ಸನ್ ಬಿ ಕೂಪರ್ 1(2), ಧೋನಿ ಸಿ ವ್ಯಾಟ್ಸನ್ ಬಿ ಕೂಪರ್ 2(3), ಜಡೇಜಾ ಅಜೇಯ 12(14), ಬ್ರಾವೊ ಅಜೇಯ 23(11), ಇತರೆ 7
ವಿಕೆಟ್ ಪತನ: 1-83, 2-86, 3-89, 4-113
ಬೌಲಿಂಗ್: ಮಲಿಕ್ 3-0-19-0, ಫಾಕ್ನರ್ 4-0-23-0, ವ್ಯಾಟ್ಸನ್ 4-0-23-0, ತ್ರಿವೇದಿ 2-0-22-0, ಕೂಪರ್ 4-0-32-2, ಬಿನ್ನಿ 3-0-18-1