ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವಾಹ್.. ವ್ಯಾಟ್ಸನ್

Rashmi Kasaragodu
Updated On : 13 May 2013, 12:29 pm

ಜೈಪುರ: ತವರಿನಲ್ಲಿ ಗೆಲವಿನ ನಾಗಾಲೋಟ ಮುಂದುವರಿಸಿದ ರಾಜಸ್ಥಾನ ರಾಯಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ರಾಜಸ್ಥಾನ ತಂಡದ ಪರ ಶೇನ್ ವ್ಯಾಟ್ಸನ್ ಹಾಗೂ ಸ್ಟುವರ್ಟ್ ಬಿನ್ನಿ ಸ್ಫೋಟಕ ಬ್ಯಾಟಿಂಗ್ ಜತೆಯಾಟ ನೀಡುವ ಮೂಲಕ ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹಾಗಾಗಿ ಮೊದಲು ಬ್ಯಾಟಿಂಗ್ ನಡೆಸಿದ ಸಿಎಸ್‌ಕೆ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 141 ರನ್ ಗಳಿಸಿತು.
ತಂಡಕ್ಕೆ ಉತ್ತಮ ಆರಂಭ ನೀಡಿದ ಆರಂಭಿಕರಾದ ಮೈಕ್ ಹಸ್ಸಿ (41) ಹಾಗೂ ಮುರಳಿ ವಿಜಯ್ () ಮೊದಲ ವಿಕೆಟ್‌ಗೆ 83 ರನ್ ಜತೆಯಾಟ ನೀಡಿದರು. ಆದರೆ 11.3ನೇ ಓವರ್‌ನಲ್ಲಿ ಬಿನ್ನಿ ಎಸೆತದಲ್ಲಿ ಹಸ್ಸಿ ಬೌಲ್ಡ್ ಆಗುವ ಮೂಲಕ ಈ ಜೋಡಿ ಬೇರ್ಪಟ್ಟಿತು. ನಂತರ ಸಿಎಸ್‌ಕೆ ದಿಢೀರ್ ಕುಸಿತ ಕಂಡಿತು. ನಂತರ ಬಂದ ರೈನಾ ಕೇವಲ 1 ರನ್‌ಗಳಿಸಿ ಕೂಪರ್ ಎಸೆತದಲ್ಲಿ ಸ್ಯಾಮ್ಸನ್‌ಗೆ ಕ್ಯಾಚ್ ನೀಡಿದರು. ನಂತರ ಬಂದ ಧೋನಿ ಅದೇ ಓವರ್‌ನಲ್ಲಿ ವ್ಯಾಟ್ಸನ್‌ಗೆ ಕ್ಯಾಚ್ ನೀಡಿ ಕೇವಲ 2 ರನ್‌ಗಳಿಸಿ ಔಟಾದರು.
ನಂತರ ಬಂದ ಜಡೇಜಾ, ವಿಜಯ್ ಜತೆಗೂಡಿ 24 ರನ್‌ಗಳ ಜತೆಯಾಟವಾಡಿದರು. ನಂತರ 55 ರನ್‌ಗಳಿಸಿದ್ದ ವಿಜಯ್ ರನೌಟ್ ಆಗುವ ಮೂಲಕ ಪೆವಿಲಿಯನ್ ಸೇರಿಕೊಂಡರು. ನಂತರ ಅಜೇಯರಾಗಿ ಉಳಿದ ಜಡೇಜಾ (12), ಬ್ರಾವೊ (23), ರನ್‌ಗಳಿಸಿ ತಂಡ 140ರ ಗಡಿ ದಾಟಲು ನೆರವಾದರು.  ಚೆನ್ನೈ ತಂಡ ನೀಡಿದ ಸಾಧರಣ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ತಂಡ ಕೇವಲ 17.1 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 144 ರನ್‌ಗಳಿಸಿ ಗೆಲವಿನ ನಗೆ ಬೀರಿತು.
ರಹಾನೆ (9), ಫಾಕ್ನರ್ (1), ಹಾಗೂ ಸ್ಯಾಮ್ಸನ್ (0) ಅವರ ವಿಕೆಟ್ ಕಳೆದುಕೊಂಡ ರಾಜಸ್ಥಾನ, 19 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಕುಸಿತ ಕಂಡಿತು. ನಂತರ ಜತೆಯಾದ ದ್ರಾವಿಡ್ (22), ವ್ಯಾಟ್ಸನ್ (70) ಜತೆಗೂಡಿ 26 ರನ್‌ಗಳ ಜತೆಯಾಟವಾಡಿದರು. ಈ ವೇಳೆ ದ್ರಾವಿಡ್ ಮೊರಿಸ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಬಿನ್ನಿ, ವ್ಯಾಟ್ಸನ್ ಜತೆಗೂಡಿ ಸ್ಫೋಟಕ ಬ್ಯಾಟಿಂಗ್ ನಡೆಸಿ 94 ರನ್‌ಗಳ ಭರ್ಜರಿ ಜತೆಯಾಟವಾಡಿ ತಂಡಕ್ಕೆ ಜಯ ತಂದರು.


ಸ್ಕೋರ್ ಬೋರ್ಡ್


ಚೆನ್ನೈ ಸೂಪರ್ ಕಿಂಗ್ಸ್ 141/4 (20 ಓವರ್)
ಹಸ್ಸಿ ಬಿ ಬಿನ್ನಿ 41(40), ವಿಜಯ್ ರನೌಟ್ (ಯಾಗ್ನಿಕ್) 55(50), ರೈನಾ ಸಿ ಸ್ಯಾಮ್ಸನ್ ಬಿ ಕೂಪರ್ 1(2), ಧೋನಿ ಸಿ ವ್ಯಾಟ್ಸನ್ ಬಿ ಕೂಪರ್ 2(3), ಜಡೇಜಾ ಅಜೇಯ 12(14), ಬ್ರಾವೊ ಅಜೇಯ 23(11), ಇತರೆ 7
ವಿಕೆಟ್ ಪತನ: 1-83, 2-86, 3-89, 4-113
ಬೌಲಿಂಗ್: ಮಲಿಕ್ 3-0-19-0, ಫಾಕ್ನರ್ 4-0-23-0, ವ್ಯಾಟ್ಸನ್ 4-0-23-0, ತ್ರಿವೇದಿ 2-0-22-0, ಕೂಪರ್ 4-0-32-2, ಬಿನ್ನಿ 3-0-18-1
ರಾಜಸ್ಥಾನ ರಾಯಲ್ಸ್ 144/5 (17.1 ಓವರ್)
ದ್ರಾವಿಡ್ ಸಿ ಧೋನಿ ಬಿ ಮೊರಿಸ್ 22(28), ರಹಾನೆ ಸಿ ವಿಜಯ್ ಬಿ ಹೊಲ್ಡರ್ 9(10), ಫಾಕ್ನರ್ ಬಿ ಹೊಲ್ಡರ್ 1(2), ಸ್ಯಾಮ್ಸನ್ ಸಿ ಧೋನಿ ಬಿ ಮೊಹಿತ್ 0(5), ವ್ಯಾಟ್ಸನ್ ಬಿ ಬ್ರಾವೊ 70(34), ಬಿನ್ನಿ ಅಜೇಯ 41(23), ಹಾಡ್ಜ್ ಅಜೇಯ 0(1), ಇತರೆ 1
ವಿಕೆಟ್ ಪತನ: 1-14, 2-18, 3-19, 4-45, 5-138
ಬೌಲಿಂಗ್: ಮೊಹಿತ್ 4-0-21-1, ಹೊಲ್ಡರ್ 4-0-20-2, ಮೊರಿಸ್ 4-0-36-1, ಬ್ರಾವೊ 3-0-35-1, ಅಶ್ವಿನ್ 1-0-23-0, ಜಡೇಜಾ 1.1-0-9-0


ಪಂದ್ಯ ಶ್ರೇಷ್ಠ: ಶೇನ್ ವ್ಯಾಟ್ಸನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement