ಆಮ್ಲಾ ಹಾದಿ ಹಿಡಿದ ರಸೂಲ್
ನವದೆಹಲಿ: ತಮ್ಮ ಧಾರ್ಮಿಕ ಭಾವನೆಯ ಹಿನ್ನಲೆಯಲ್ಲಿ ಜಮ್ಮು ಕಾಶ್ಮಿರದ ಆಲ್ರೌಂಡರ್ ಪರ್ವೆಜ್ ರಸೂಲ್ ತಮ್ಮ ಐಪಿಎಲ್ ಜೆರ್ಸಿ ಮೇಲೆ ಮದ್ಯ ಕಂಪನಿಯ ಲೋಗೊ ಧರಿಸಲು ನಿರಾಕರಿಸಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ಹಶೀಂ ಆಮ್ಲಾ ಈ ರೀತಿಯ ತಿರ್ಮಾನ ಕೈಗೊಂಡಿದ್ದರು.
24 ವರ್ಷದ ರಸೂಲ್ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್ ಪಂದ್ಯಾವಳಿಗೆ ಪದಾರ್ಪಣೆ ಮಾಡಿದ್ದು, ಈ ಪಂದ್ಯದಲ್ಲಿ ಮದ್ಯದ ಕಂಪನಿಯ ಲೋಗೊವನ್ನು ರಸೂಲ್ ಟೇಪ್ನಿಂದ ಮುಚ್ಚಿದ್ದರು.