ಐಒಸಿ ಸಭೆಗೆ ಅಧಿಕಾರಿಗಳ ಸಿದ್ಧತೆ
ನವದೆಹಲಿ: ಭಾರತವನ್ನು ಒಲಿಂಪಿಕ್ಸ್ ಪರಿದಿಯೊಳಗೆ ಸೇರಿಸಿಕೊಳ್ಳುವ ಕುರಿತಂತೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಜತೆ ಚರ್ಚೆ ನಡೆಸುವ ಸಲುವಾಗಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ)ಯ ಉನ್ನತ ಅಧಿಕಾರಿಗಳು ಸಕಲ ಸಿದ್ಧತೆ ನಡೆಸಿದ್ದಾರೆ.
ಭಾರತಕ್ಕೆ ಒಲಿಂಪಿಕ್ಸ್ ಪರಿದಿಯೊಳಗೆ ಸೇರಲು ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವ ಹಿನ್ನಲೆಯಲ್ಲಿ ಐಒಎ ಅಧಿಕಾರಿಗಳು ಅಂತಿಮ ತಯಾರಿ ನಡೆಸಿದ್ದಾರೆ. ಈ ಸಭೆ ಮೇ 15 ರಂದು ಲೌಸನ್ನೆಯಲ್ಲಿ ನಡೆಯಲಿದ್ದು, ಒಲಿಂಪಿಕ್ಸ್‌ನಲ್ಲಿ ಭಾರತದ ನಿಷೇಧವನ್ನು ತೆರವುಗೊಳಿಸಲು ಎಲ್ಲಾ ಪ್ರಯತ್ನವನ್ನು ನಡೆಸಲಿದ್ದಾರೆ.
ಐಒಎ ಪ್ರಭಾರಿ ಅಧ್ಯಕ್ಷ ವಿ.ಕೆ ಮಲ್ಹೋತ್ರಾ ಹಾಗೂ ಭಾರತದ ಐಒಸಿ ಸದಸ್ಯರಾಗಿರುವ ರಣ್‌ಧೀರ್ ಸಿಂಗ್ ಈ ಸಭೆಯನ್ನು ತಿರಸ್ಕರಿಸಿದ್ದರು, ಐಒಎ ಅಧಿಕಾರಿಗಳು ಭಾರತದ ನಿಷೇಧವನ್ನು ತೆರವುಗೊಳಿಸುವ ಭರವಸೆಯೊಂದಿಗೆ ಸೋಮವಾರ ರಾತ್ರಿ ಲೌಸನ್ನೆಗೆ ಪ್ರಯಾಣ ಬೆಳೆಸಿದ್ದಾರೆ. ಕೇಂದ್ರ ಕ್ರೀಡಾ ಸಚಿವರಾದ ಜಿತೆಂದರ್ ಸಿಂಗ್, ಕ್ರೀಡಾ ಕಾರ್ಯದರ್ಶಿ ಪಿ.ಕೆ ದೆಬ್, ಒಲಿಂಪಿಕ್ ತಾರೆಯರಾದ ಶೂಟರ್ ಅಭಿನವ್ ಬಿಂದ್ರಾ ಹಾಗೂ ಸೈಲರ್ ಮಲವ್ ಶ್ರಾಫ್ ಸಹ ಈ ಸಭೆಗೆ ಹಾಜರಾಗಲಿದ್ದಾರೆ.