ಟಿಸಿಎಸ್ ಬೆಂಗಳೂರು 10ಕೆ: ಎನ್ಜಿಒಗಳಿಗೆ ಭಾರಿ ದೇಣಿಗೆ
ಬೆಂಗಳೂರು: ವರ್ಷದಿಂದ ವರ್ಷಕ್ಕೆ ತನ್ನ ಪ್ರಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತಿರುವ ಟಿಸಿಎಸ್ ವಿಶ್ವ ಬೆಂಗಳೂರು 10ಕೆ, ಈ ಬಾರಿ ಎನ್ಜಿಒಗಳ ದೇಣಿಗೆಗೆ 3.25 ಕೋಟಿ ಸಂಗ್ರಹಿಸಿದೆ. ಕಳೆದ 5 ವರ್ಷದಲ್ಲಿ 8 ಕೋಟಿ ಸಂಗ್ರಹವಾಗಿದ್ದು, ಈ ಬಾರಿ ಕಳೆದ ಬಾರಿಗಿತಲೂ ಹೆಚ್ಚು ಹಣ ಸಂಗ್ರಹವಾಗುವ ಸೂಚನೆಗಳು ಬಂದಿದೆ. ಈ ಬಾರಿ ಹೀಗಾಗಲೇ 3.25 ಕೋಟಿ ಸಂಗ್ರವಾಗಿದ್ದು, ಇದರಿಂದ 75ಕ್ಕೂ ಹೆಚ್ಚು ಎನ್ಜಿಒಗಳಿಗೆ ಸಹಕಾರಿಯಾಗಲಿದೆ. ಈ ಬಾರಿ 31 ಕಾರ್ಪೊರೇಟ್ಗಳು 41 ತಂಡದಲ್ಲಿ ಭಾಗವಹಿಸುತ್ತಿದ್ದು, 300 ಚಾರಿಟಿ ಫಂಡ್ ಹಾಗೂ 6000ಕ್ಕೂ ಹೆಚ್ಚು ದಾನಿಗಳನ್ನು ಹೊಂದಿದೆ ಎಂದು ಟಿಸಿಎಸ್ ವಿಶ್ವ ಬೆಂಗಳೂರು 10ಕೆ ಪಾಲುದಾರ ಬೆಂಗಳೂರು ಕೇರ್ನ ಅಧ್ಯಕ್ಷ ಮುರೆ ಕುಶಾವ್ ತಿಳಿಸಿದ್ದಾರೆ.