ಮುಂಬೈಗೆ ಬೃಹತ್ ಸವಾಲು
ಮುಂಬೈ: ಬ್ಯಾಟ್ಸ್ಮನ್ಗಳ ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ಸನ್ರೈಸರ್ಸ್ ಹೈದರಾಬಾದ್ ತಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ 179 ರನ್ಗಳ ಬೃಹತ್ ಸವಾಲು ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸನ್ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 178 ರನ್ ಕಲೆಹಾಕಿತು.
ಆರಂಭಿಕರಾಗಿ ಕಣಕ್ಕಿಳಿದ ಪಾರ್ಥೀವ್ ಪಟೇಲ್ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. ಕೇವಲ 14 ಎಸೆತಗಳನ್ನು ಎದುರಿಸಿದ ಪಾರ್ಥೀವ್ 26 ರನ್ಗಳಿಸಿದರು. ಈ ವೇಳೆ ಮಾಲಿಂಗಾ ಎಸೆತದಲ್ಲಿ ರಾಯುಡುಗೆ ಕ್ಯಾಚ್ ನೀಡಿ ಹೊರ ನಡೆದರು. ನಂತರ ಧವನ್ ಕೂಡ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ಕೇವಲ 41 ಎಸೆತಗಳಲ್ಲಿ 59 ರನ್ ಕಲೆ ಹಾಕಿದರು. ಎರಡನೇ ವಿಕೆಟ್ಗೆ ವಿಹಾರಿ ಜತೆಗೆ 73 ರನ್ಗಳ ಜತೆಯಾಟ ವಾಡಿದ ಧವನ್, ಜಾನ್ಸನ್ ಎಸೆತದಲ್ಲಿ ಕಾರ್ತಿಕ್ಗೆ ನೀಡಿದರು. ನಂತರ ಜತೆಯಾದ ವಿಹಾರಿ ಹಾಗೂ ನಾಯಕ ವೈಟ್ 3ನೇ ವಿಕೆಟ್ಗೆ 55 ರನ್ ಜತೆಯಾಟವಾಡಿದರು. ಈ ವೇಳೆ 41 ರನ್ಗಳಿಸಿದ್ದ ವಿಹಾರಿ ಮಾಲಿಂಗಾ ಎಸೆತದಲ್ಲಿ ಜಾನ್ಸನ್ಗೆ ಕ್ಯಾಚ್ ನೀಡಿ ಔಟಾದರು. ಅಂತಿಮವಾಗಿ ಅಜೇಯರಾಗುಳಿದ ವೈಟ್ 43 ಹಾಗೂ ಪೆರೇರಾ 2 ರನ್ಗಳಿಸಿದರು.
ಸ್ಕೋರ್ ಬೋರ್ಡ್
ಸನ್ರೈಸರ್ಸ್ ಹೈದರಾಬಾದ್ 178/3 (20 ಓವರ್)
ಪಟೇಲ್ ಸಿ ರಾಯುಡು ಬಿ ಮಾಲಿಂಗಾ 26(14), ಧವನ್ ಸಿ ಕಾರ್ತಿಕ್ ಬಿ ಜಾನ್ಸನ್ 59(41), ವಿಹಾರಿ ಸಿ ಜಾನ್ಸನ್ ಬಿ ವಿಹಾರಿ 41(37), ವೈಟ್ ಅಜೇಯ 43(23), ಪೆರೇರಾ ಅಜೇಯ 2(5), ಇತರೆ 7
ವಿಕೆಟ್ ಪತನ: 1-38, 2-111, 3-166
ಬೌಲಿಂಗ್: ಜಾನ್ಸನ್ 4-0-43-1, ಕುಲ್ಕರ್ಣಿ 4-0-42-0, ಹರ್ಭಜನ್ 3-0-19-0, ಮಾಲಿಂಗಾ 4-0-26-2, ಓಜಾ 4-0-37-0, ಪೊಲಾರ್ಡ್ 1-0-10-0