'ವ್ಯಾಟ್ಸನ್ ಒಬ್ಬ ಅದ್ಭುತ ಆಟಗಾರ'
ಜೈಪುರ: ರಾಜಸ್ಥಾನ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿರುವ ಶೇನ್ ವ್ಯಾಟ್ಸನ್ ಓರ್ವ ಅದ್ಭುತ ಮ್ಯಾಚ್ ವಿನ್ನರ್ ಆಟಗಾರ ಎಂದು ತಂಡದ ನಾಯಕ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.
ಮುಂದಿನ ಪಂದ್ಯಗಳಲ್ಲೂ ವ್ಯಾಟ್ಸನ್ ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರಿಸುವ ವಿಶ್ವಾಸವಿದೆ. ಏಕೆಂದರೆ ಆತ ಓರ್ವ ಮ್ಯಾಚ್ ವಿನ್ನರ್. ತಂಡ ಸಂಕಷ್ಟದ ಪರಿಸ್ಥಿತಿಯಲ್ಲಿ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ ಎಂದು ದ್ರಾವಿಡ್ ತಿಳಿಸಿದರು.
ಇದೇ ವೇಳೆ ವ್ಯಾಟ್ಸನ್ ಬಗ್ಗೆ ಮಾತನಾಡಿದ ಸಿಎಸ್ಕೆ ತಂಡದ ಕೋಚ್ ಸ್ಟೀಫನ್ ಫ್ಲೆಮ್ಮಿಂಗ್, ಶೇನ್ ವ್ಯಾಟ್ಸನ್ ಅವರ ಇನಿಂಗ್ಸ್ ವಿಶೇಷವಾಗಿದ್ದು, ಎಲ್ಲ ಬ್ಯಾಟ್ಸ್ಮನ್ಗಳು ರನ್ಗಳಿಸಲು ಪರದಾಡುತ್ತಿರುವಾಗ ಬಂದ ವ್ಯಾಟ್ಸನ್ ಪಂದ್ಯದ ಗತಿಯನ್ನು ಕ್ಷಣಾರ್ಧದಲ್ಲಿ ಬದಲಿಸಿದರು ಎಂದು ತಿಳಿಸಿದರು.