ಉತ್ತರ ಪ್ರದೇಶಕ್ಕೆ ಗೆಲವು
ಬೆಂಗಳೂರು: ರಂಗಸ್ವಾಮಿ ರಾಷ್ಟ್ರೀಯ ಹಾಕಿ ಪಂದ್ಯಾವಳಿಯ ಅಂಗವಾಗಿ, ಮಂಗಳವಾರ ನಡೆದ ಮತ್ತೊಂದು ಪಂದ್ಯದಲ್ಲಿ, ಉತ್ತರ ಪ್ರದೇಶ ತಂಡ, ಜಾರ್ಖಂಡ್ ತಂಡವನ್ನು 11-0 ಗೋಲುಗಳ ಅಂತರದಿಂದ ಸೋಲಿಸಿತು. ಉತ್ತರ ಪ್ರದೇಶ ತಂಡದ ಪರವಾಗಿ, ಪ್ರೇಮ್ ಕುಮಾರ್ (5, 13, 38ನೇ ನಿಮಿಷ), ರವಿ ಭಾತಿ (18, 60ನೇ ನಿಮಿಷ), ಇಮ್ರಾನ್ ಖಾನ್ (37, 64ನೇ ನಿಮಿಷ), ದಿವಾಕರ್ ರಾಮ್ (47, 51, 59, 70ನೇ ನಿಮಿಷ) ಗೋಲು ಗಳಿಸಿದರು. ಎದುರಾಳಿ ತಂಡದಿಂದ ಯಾವುದೇ ಗೋಲು ದಾಖಲಾಗಲಿಲ್ಲ.