ಚೆನ್ನೈಗೆ ನಿರೀಕ್ಷಿತ ಜಯ
ಮಂಗಳವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಜಯ ಗಳಿಸಿದೆ.
ಚೆನ್ನೈ: ನಿರೀಕ್ಷೆಯಂತೆ ಮಂಗಳವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಜಯ ಗಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 168 ರನ್‌ಗಳಿಸಿತ್ತು. ಈ ಮೊತ್ತ ಬೆನ್ನಟ್ಟಿದ ಡೆಲ್ಲಿ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿ, 33 ರನ್‌ಗಳ ಅಂತರದಲ್ಲಿ ಶರಣಾಯಿತು.
ಚೆನ್ನೈ ದೊಡ್ಡ ಮೊತ್ತ: ತವರಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಚೆನ್ನೈನ ಆರಂಭಿಕ ಜೋಡಿ ಮೈಕ್ ಹಸ್ಸಿ ಹಾಗೂ ಮುರಳಿ ವಿಜಯ್ ನಿಧಾನ ಗತಿಯ ಆರಂಭಕ್ಕೆ ಮುಂದಾದರು. ಈ ಜೋಡಿ ಮೊದಲ ವಿಕೆಟ್‌ಗೆ 61 ರನ್‌ಗಳ ಆರಂಭಿಕ ಜತೆಯಾಟ ನೀಡಿತು. ಈ ವೇಳೆ 31 ರನ್‌ಗಳಿಸಿ ರನ್‌ಗತಿಯನ್ನು ಹೆಚ್ಚಿಸುತ್ತಿದ್ದ ಮುರಳಿ ವಿಜಯ್, ರೊಹ್ರೆರ್ ಚುರುಕಿನ ಫೀಲ್ಡಿಂಗ್‌ನಿಂದಾಗಿ ರನೌಟ್ ಆದರು. ಆನಂತರ, ನಾಯಕ ಧೋನಿ ಹಾಗೂ ಜಡೇಜಾ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ 57ರನ್‌ಗಳ ಜತೆಯಾಟ ನೀಡಿದರಲ್ಲದೇ, ತಂಡದ ಮೊತ್ತ 160 ರನ್ ಗಡಿ ದಾಟಲು ನೆರವಾದರು.
ಸೋತ ಡೆಲ್ಲಿ: ಚೆನ್ನೈ ನೀಡಿದ್ದ ದೊಡ್ಡ ಗುರಿ ಬೆನ್ನಟ್ಟಿದ ಡೆಲ್ಲಿ, ಚೆನ್ನೈನ ಆಕ್ರಮಣಕಾರಿ ಬೌಲಿಂಗ್‌ಗೆ ತತ್ತರಿಸಿತು. ಶೂನ್ಯ ಮೊತ್ತಕ್ಕೇ ಸೆಹ್ವಾಗ್ ಔಟಾದರು. ಆದರೆ, ಮತ್ತೊಬ್ಬ ಆರಂಭಿಕ ಉನ್ಮುಕ್ತ್ ಚಾಂದ್, ಜೊನಾಥನ್ ಬೋಥಾ 2ನೇ ವಿಕೆಟ್‌ಗೆ 24 ರನ್ ಸೇರಿಸಿದರು. ಆದರೆ, ಈ ಜೋಡಿ ಬೇರೆಯಾದ ಮೇಲೆ ಡೆಲ್ಲಿ ಪರ ದಿಟ್ಟ ಹೋರಾಟ ತೋರಿದ್ದು ಡೇವಿಡ್ ವಾರ್ನರ್. 37 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 44 ರನ್ ಗಳಿಸಿದ ಅವರು ಗೆಲವು ತರಲು ಪ್ರಯತ್ನಿಸಿದರು. ಆದರೆ, ಅವರು ಔಟಾದ ಮೇಲೆ ಯಾರೊಬ್ಬರೂ ಗಟ್ಟಿಯಾಗಿ ನಿಂತು ಆಡದ್ದರಿಂದ, 20 ಓವರ್‌ಗಳಲ್ಲಿ ಡೆಲ್ಲಿ, 135 ರನ್ ಮಾತ್ರ ಗಳಿಸಿತು.
ಸ್ಕೋರ್ ಬೋರ್ಡ್
ಚೆನ್ನೈ ಸೂಪರ್ ಕಿಂಗ್ಸ್ 168/4 (20 ಓವರ್)
ಹಸ್ಸಿ ಸಿ ಸೆಹ್ವಾಗ್ ಬಿ ಯಾದವ್ 26(26), ವಿಜಯ್ ರನೌಟ್ (ರೊಹ್ರೆರ್) 31(23), ರೈನಾ ಸಿ ವಾರ್ನರ್ ಬಿ ಮರ್ವೆ 7(11), ಧೋನಿ ಅಜೇಯ 58(35), ಜಡೇಜಾ ಬಿ ಯಾದವ್ 24(17), ಬ್ರಾವೊ ಅಜೇಯ 12(8), ಇತರೆ 10
ವಿಕೆಟ್ ಪತನ: 1-61, 2-69, 3-74, 4-131
ಬೌಲಿಂಗ್: ಇರ್ಫಾನ್ 3-0-24-0, ಸಿದ್ಧಾರ್ತ್ 4-0-37-0, ನೆಹ್ರಾ 4-0-36-0, ಯಾದವ್ 4-0-26-2, ಬೋತಾ 2-0-23-0, ಮರ್ವೆ 3-0-19-1.
ಡೆಲ್ಲಿ ಡೇರ್‌ಡೆವಿಲ್ಸ್: 135/9 (20 ಓವರ್)
ವೀರೇಂದ್ರ ಸೆಹ್ವಾಗ್ ಸಿ ಧೋನಿ ಬಿ ಶರ್ಮಾ 0 (2), ಉನ್ಮುಕ್ತ್ ಚಾಂದ್ ಸಿ ಹೋಲ್ಡರ್ ಬಿ ಶರ್ಮಾ 16 (2), ಬೋಥಾ 23 (20), ಡೇವಿಡ್ ವಾರ್ನರ್ ಸಿ ವಿಜಯ್ ಬಿ ಮಾರ್ಕೆಲ್ 44 (37), ಜಾಧವ್ ಸಿ ಧೋನಿ ಬಿ ಮಾರ್ಕೆಲ್ 2 (4), ರೋಹ್ರರ್ ಸಿ ಅಶ್ವಿನ್ ಬಿ ಮಾರ್ಕೆಲ್ 4 (5), ವ್ಯಾನ್ ಡಿ ಮರ್ವೆ ಸಿ ರೈನಾ ಬಿ ಅಶ್ವಿನ್ 14 (16), ಇರ್ಫಾನ್ ಪಠಾಣ್ ಬೌಲ್ಡ್ ಬಿ ಬ್ರಾವೊ 4 (5), ಉಮೇಶ್ ಯಾದವ್ ಅಜೇಯ 12 (9), ಆಶೀಶ್ ನೆಹ್ರಾ ಸಿ ಧೋನಿ ಬಿ 0 (1), ಸಿದ್ದಾರ್ಥ್ ಕೌಲ್ ಅಜೇಯ 7 (9). ಇತರೆ 9.
ವಿಕೆಟ್ ಪತನ: 1-0, 2-34, 3-49, 4-56, 5-63, 6-102, 7-115, 8-125, 9-125.
ಬೌಲಿಂಗ್: ಮೋಹಿತ್ ಶರ್ಮಾ 4-0-22-2, ಹೋಲ್ಡರ್ 4-0-39-0, ಅಶ್ವಿನ್ 4-0-19-2, ಮಾರ್ಕೆಲ್ 4-0-32-3, ಬ್ರಾವೊ 4-0-19-2.