ಫುಟ್ಬಾಲ್: ಸದರ್ನ್ ಬ್ಲೂಸ್‌ಗೆ ಜಯ
ಬೆಂಗಳೂರು: ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಿ ಡಿವಿಷನ್ ಪಂದ್ಯಾವಳಿಯ ಮಂಗಳವಾರದ ಪಂದ್ಯದಲ್ಲಿ ಸದರ್ನ್ ಬ್ಲೂ ತಂಡವು ಶ್ರೀ ಗಜಾನನ ತಂಡದ ವಿರುದ್ಧ 4-1 ಗೋಲುಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು. ಆರಂಭದಿಂದಲೂ ಆಕ್ರಮಣಕಾರಿಯಾಗಿ ಆಟ ಪ್ರದರ್ಶಿಸಿದ ಸದರ್ನ್ ಬ್ಲೂ ತಂಡದ ಪರ ಚಂದ್ರಶೇಖರ (8, 11ನೇ), ಆದಿತ್ಯ (49,52ನೇ) ನಿಮಿಷದಲ್ಲಿ ಗೋಲು ದಾಖಲಿಸಿದರು. ಇನ್ನು ಗಜಾನನ ತಂಡದ ಪರ ಮಂಜ 26ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ದಿನದ ಮತ್ತೊಂದು ಪಂದ್ಯದಲ್ಲಿ ಧರ್ಮರಾಜ ಯೂನಿಯನ್ ತಂಡ 4-2 ಅಂತರದಲ್ಲಿ ಓರಿಯೆಂಟಲ್ ತಂಡವನ್ನು ಮಣಿಸಿತು. ಧರ್ಮರಾಜ ಯೂನಿಯನ್ ತಂಡದ ಪರ ಸೆಲ್ವಾ (15, 32ನೇ), ಲೆಯಾನ್ (52ನೇ), ಸುರೇಶ್ (19ನೇ) ನಿಮಿಷದಲ್ಲಿ ಗೋಲು ದಾಖಲಿಸಿದರು. ಓರಿಯೆಂಟಲ್ ತಂಡದ ಪರ ಮುರಳಿ (50ನೇ), ರಘು (55ನೇ) ನಿಮಿಷದಲ್ಲಿ ಗೋಲು ದಾಖಲಿಸಿದರು.