ಬ್ಯಾಸ್ಕೆಟ್ ಬಾಲ್: ಹಲಸೂರು ತಂಡಕ್ಕೆ ಜಯ
ಬೆಂಗಳೂರು: ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ಸಬ್ ಜೂನಿಯರ್ ಚಾಂಪಿಯನ್‌ಷಿಪ್‌ನ ಮಂಗಳವಾರದ ಪುರುಷರ ವಿಭಾಗದ ಪಂದ್ಯದಲ್ಲಿ ಹಲಸೂರು ತಂಡವು ಮಂಗಳೂರು ತಂಡದ ವಿರುದ್ಧ 40-8 ಅಂತರದಲ್ಲಿ ಜಯ ದಾಖಲಿಸಿತು.
ಪುರುಷರ ವಿಭಾಗದ ಉಳಿದ ಪಂದ್ಯದಲ್ಲಿ ಭಾರತ್ ತಂಡವು ವಿಬಿಸಿ ಮಂಡ್ಯ ತಂಡದ ವಿರುದ್ಧ 30-29 ಅಂತರದಲ್ಲಿ ಗೆಲವು ಸಾಧಿಸಿತು. ಮರ್ಚೆಂಟ್ಸ್ ತಂಡವು ಶಿವಮೊಗ್ಗ ಯೂತ್ಸ್ ತಂಡದ ವಿರುದ್ಧ 30-27 ಅಂತರದಲ್ಲಿ ಜಯ ಸಾಧಿಸಿದೆ. ಯಂಗ್ ಓರಿಯನ್ ತಂಡವು ಕನಕ ಕೋಲಾರ್ ತಂಡದ ವಿರುದ್ಧ 27-25 ಅಂತರದಲ್ಲಿ ಜಯ ಸಾಧಿಸಿತು. ಅಂತಿಮ ಪಂದ್ಯದಲ್ಲಿ ಬೀಗಲ್ಸ್ ತಂಡವು ಪಟ್ಟಾಭಿರಾಮನಗರ ತಂಡದ ವಿರುದ್ಧ 33-16 ಅಂತರದಲ್ಲಿ ಜಯಗಳಿಸಿತು.
ಉಳಿದಂತೆ ಮಹಿಳೆಯರ ವಿಭಾಗದಲ್ಲಿ ಬೀಗಲ್ಸ್ ತಂಡ ಅಪ್ಪಯ್ಯ ತಂಡದ ವಿರುದ್ಧ 20-17, ಮೌಂಟ್ ಕ್ಲಬ್ ತಂಡ ಐಬಿಬಿಸಿ ವಿರುದ್ಧ 39-10, ಮರ್ಚೆಂಟ್ಸ್ ತಂಡ ಶಿವಮೊಗ್ಗ ಯೂತ್ಸ್ ತಂಡದ ವಿರುದ್ಧ23-3, ಯಂಗ್ ಓರಿಯನ್ ತಂಡವು ಕೋರಮಂಗಲ ತಂಡದ ವಿರುದ್ಧ 29-8 ಅಂತರದ ಜಯ ದಾಖಲಿಸಿತು.