ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಉತ್ತರ ಪ್ರದೇಶ, ಪಂಜಾಬ್ ತಂಡಗಳಿಗೆ ಜಯ

Vishwanath S
Updated On : 16 May 2013, 12:17 pm

ಬೆಂಗಳೂರು: 64ನೇ ರಂಗಸ್ವಾಮಿ ರಾಷ್ಟ್ರೀಯ ಹಾಕಿ ಪಂದ್ಯಾವಳಿ ಹಿನ್ನೆಲೆಯಲ್ಲಿ ಬುಧವಾರ ನಡೆದ ಪಂದ್ಯಗಳಲ್ಲಿ ಉತ್ತರ ಪ್ರದೇಶ ಹಾಗೂ ಪಂಜಾಬ್ ತಂಡಗಳು ಜಯಗಳಿಸಿವೆ.
ಮೊದಲ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡ, ಮಣಿಪುರ ತಂಡವನ್ನು 19-2ರ ದೊಡ್ಡ ಅಂತರದಿಂದ ಸೋಲಿಸಿತು. ಇದಾದ ನಂತರ ನಡೆದ ಎರಡನೇ ಪಂದ್ಯದಲ್ಲಿ, ಪಂಜಾಬ್ ತಂಡ, ಜಾರ್ಖಂಡ್ ತಂಡವನ್ನು 6-0 ಅಂತರದಲ್ಲಿ ಪರಾಭವಗೊಳಿಸಿತು.
ಭಾರೀ ಗೆಲವು: ಪ್ರಸಕ್ತ ಪಂದ್ಯಾವಳಿಯಲ್ಲಿ ದುರ್ಬಲ ತಂಡವೆನಿಸಿಕೊಂಡಿರುವ ಮಣಿಪುರ ಹಾಗೂ ಬಲಿಷ್ಠ ಉತ್ತರ ಪ್ರದೇಶ ತಂಡದ ನಡುವಿನ ಕದನ, ಕುತೂಹಲವಾಗಿತ್ತು. ನಿರೀಕ್ಷೆಯಂತೆ, ಉತ್ತರ ಪ್ರದೇಶ ತಂಡ ಮಣಿಪುರ ತಂಡವನ್ನು 19-2ರ ಭಾರೀ ಅಂತರದಲ್ಲಿ ಸೋಲಿಸಿತು.
ಉತ್ತರ ಪ್ರದೇಶದ ಪರವಾಗಿ, ಪಂದ್ಯದ ಮೊದಲ ನಿಮಿಷದಲ್ಲೇ ಗೋಲು ಗಳಿಸಿದ್ದ ದಿವಾಕರ್ ರಾಮ್, ನಂತರ, 21ನೇ ಹಾಗೂ 46ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಅವರ ನಂತರ, ಪ್ರೇಮ್ ಕುಮಾರ್ ಅವರು 10, 16, 23, 26, 52ನೇ ನಿಮಿಷಗಳಲ್ಲಿ ಗೋಲು ಗಳಿಸಿಕೊಟ್ಟರು.
ಇವರಿಬ್ಬರ ನಂತರ, ಫಾರೂಕ್ ಅಲ್ವಿ ಅವರು 34ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಪ್ರಮೋದ್ ಕುಮಾರ್ ಅವರು, 40, 42ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ಆನಂತರ, ಅಭಿಶೇಕ್ ಸಿಂಗ್ ಅವರು 12, 17, 18ನೇ ನಿಮಿಷಗಳಲ್ಲಿ ಹಾಗೂ ಇಮ್ರಾನ್ ಖಾನ್ 25, 28, 30, 32 ಹಾಗೂ 54ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು.
ಮಣಿಪುರ ಪರವಾಗಿ, ಪೂರ್ಣಚಂದ್ರ ಅವರು ಪಂದ್ಯದ 11ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಬಿಂದ್ಯಾ ಕುಮಾರ್ ಅವರು 46ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.
ಪಂಜಾಬ್‌ಗೂ ಸುಲಭ ಜಯ: ಇನ್ನು, ಪಂಜಾಬ್ ಹಾಗೂ ಜಾರ್ಖಂಡ್ ನಡುವೆ ನಡೆದ ಪಂದ್ಯದಲ್ಲಿ, ಪಂಜಾಬ್ ಪಂದ್ಯದ ಆರಂಭದಿಂದಲೂ ಎದುರಾಳಿಗಳ ಮೇಲೆ ಹಿಡಿತ ಸಾಧಿಸಿತು. ಪಂಜಾಬ್ ಪರವಾಗಿ ಬಲ್ವಿಂದರ್ ಸಿಂಗ್ 20ನೇ ನಿಮಿಷ ಹಾಗೂ 41ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಸತ್ವಿಂದರ್ ಸಿಂಗ್ ಅವರು 36ನೇ ಹಾಗೂ 56ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ಆನಂತರ, ಸಂಜೀವ್ ಕುಮಾರ್ ಅವರು 44ನೇ ಹಾಗೂ 57ನೇ ನಿಮಿಷಗಳಲ್ಲಿ ಗೋಲು ಗಳಿಸಿದರು.
ಅತ್ತ, ಎದುರಾಳಿಗಳಿಂದ ಯಾವುದೇ ಗೋಲು ದಾಖಲಾಗಲಿಲ್ಲದ ಕಾರಣ, ಪಂದ್ಯದಲ್ಲಿ ಪಂಜಾಬ್ ತಂಡ 6-0 ಅಂತರದಲ್ಲಿ ಗೆಲವು ಸಾಧಿಸಿತು.

ಅಂಕಪಟ್ಟಿ
ಸ್ಥಾನ    ತಂಡ    ಪಂದ್ಯ    ಗೆಲವು    ಸೋಲು    ಡಾ    ಅಂಕ
1.    ಕರ್ನಾಟಕ    5    3    0    2    11
2.    ಉ. ಪ್ರದೇಶ    5    3    1    1    10
3.    ಮುಂಬೈ    5    3    2    0    10
4.    ಪಂಜಾಬ್    5    3    2    0    9
5.    ಜಾರ್ಖಂಡ್    5    1    4    0    3
6.    ಮಣಿಪುರ    5    0    5    0    0

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement