ಏಳು ನಗರಗಳಲ್ಲಿ ಜೂನಿಯರ್ ಫುಟ್ಬಾಲ್ ಶಿಬಿರ
ಬೆಂಗಳೂರು: ಕಿರಿಯ ಫುಟ್ಬಾಲ್ ಆಟಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಕಳೆದ ಮೂರು ವರ್ಷಗಳಿಂದ ಕಿರಿಯರ ಫುಟ್ಬಾಲ್ ಶಿಬಿರವನ್ನು ನಡೆಸುತ್ತಿದ್ದು, ಈ ಬಾರಿ ಏಷ್ಯನ್ ಲೆಗ್‌ಅನ್ನು ಪರಿಚಯಿಸುತ್ತಿದೆ. ಈ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಶಿಬಿರವನ್ನು ಆಯೋಜಿಸಲಾಗುತ್ತಿದ್ದು, ಎಫ್‌ಸಿ ಬೇಯೆಂ ಮುನಿಚ್ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗುತ್ತಿದೆ. ಈ ಶಿಬಿರವು ಜೂನ್ ತಿಂಗಳಲ್ಲಿ ಥೈಲ್ಯಾಂಡ್‌ನಲ್ಲಿ ನಡೆಯಲಿದೆ. ದೇಶದಾದ್ಯಂತ ಒಟ್ಟು 7 ನಗರಗಳಲ್ಲಿ ನಡೆಯಲಿದ್ದು, ಪ್ರತಿ ನಗರದಿಂದಲೂ ಒಬ್ಬ ಆಟಗಾರರನ್ನು ಆಯ್ಕೆ ಮಾಡಲಾಗುವುದು ಎಂದು ರಾಜ್ಯ ಅಲೈಯನ್ಸ್ ಮುಖ್ಯಸ್ಥ ಶಿಬಶಿಶ್ ಮೊಹಾಂತಿ ತಿಳಿಸಿದರು. ಈ ಶಿಬಿರದ ಆಯ್ಕೆ ಪ್ರಕ್ರಿಯೆಯಲ್ಲಿ ದೇಶದಾತ್ಯಂತ ಪುಟ್ಬಾಲ್ ಕ್ಲಬ್ ಹಾಗೂ 140 ಶಾಲೆಗಳಿಂದ ಸುಮಾರು 5,000 ಮಕ್ಕಳು ಭಾಗವಹಿಸಲಿದ್ದು, ಬೆಂಗಳೂರಿನಲ್ಲಿ ನಡೆಯಲಿರುವ ಈ ಆಯ್ಕೆ ಪ್ರಕ್ರಿಯೆಯಲ್ಲಿ ಕ್ಲಬ್‌ಗಳು ಹಾಗೂ ಶಾಲೆಗಳಿಂದ 1.200 ವಿಥ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಕಿರಿಯ ಆಟಗಾರರು ಜೂನ್‌ನಲ್ಲಿ ಥೈಲ್ಯಾಂಡ್‌ನಲ್ಲಿ ನಡೆಯುವ ನಾಲ್ಕು ದಿನಗಳ ಶಿಬಿರದಲ್ಲಿ ಭಾಗವಹಿಸಲು ಅವಕಾಶ ದೊರಕಲಿದೆ ಎಂದು ಅವರು ತಿಳಿಸಿದರು.