ತವರಲ್ಲಿ ಮಿನುಗುತಾರೆ
ಮುಂಬೈ ಇಂಡಿಯನ್ಸ್ ತಂಡವು ಬುಧವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 14 ರನ್ಗಳಿಂದ ಸೋಲಿಸಿತು.
ಮುಂಬೈ: ಸ್ಥಳೀಯ ಪ್ರತಿಭೆ ಆದಿತ್ಯ ತಾರೆ ಅವರ ಅರ್ಧ ಶತಕದ ಸಹಾಯದಿಂದ ಬುಧವಾರ ನಡೆದ ಪಂದ್ಯದಲ್ಲಿ ಅದು ರಾಜಸ್ಥಾನ ರಾಯಲ್ಸ್ ತಂಡವನ್ನು 14 ರನ್ಗಳಿಂದ ಸೋಲಿಸಿ, ವಿಜಯದ ಕೇಕೆ ಹಾಕಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದಿದ್ದ ಮುಂಬೈ, ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ, 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು. ಮುಂಬೈ ಪರ ಆರಂಭಿಕರಾಗಿ ಕಣಕ್ಕಿಳಿದ ಗ್ಲೆನ್ ಮಾಕ್ಸ್ವೆಲ್ ಹಾಗೂ ಆದಿತ್ಯ ತಾರೆ ಜೋಡಿಯನ್ನು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲು ರಾಯಲ್ಸ್ ಬಿಡಲಿಲ್ಲ. ತಂಡದ ಮೊತ್ತ 25 ರನ್ ಆಗಿದ್ದಾಗ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಮ್ಯಾಕ್ಸ್ವೆಲ್ ಅವರನ್ನು ಎಲ್ಬಿ ಬಲೆಗೆ ಕೆಡವಿದ ವ್ಯಾಟ್ಸನ್ ತಂಡಕ್ಕೆ ಮೊದಲ ಮುನ್ನಡೆ ತಂದುಕೊಟ್ಟರು. ನಂತರ ಬಂದ ದಿನೇಶ್ ಕಾರ್ತಿಕ್, ತಾರೆ ಜತೆಗೂಡಿ ತಂಡದ ರನ್ಗತಿಯನ್ನು ಮೇಲೆತ್ತಿದರು. ಈ ಜೋಡಿ ಹೆಚ್ಚು ಹೊತ್ತು ಕಾಯದೆ ಬಿರುಸಿನ ಬ್ಯಾಟಿಂಗ್ಗೆ ಮುಂದಾಯಿತು.
2ನೇ ವಿಕೆಟ್ಗೆ ಈ ಜೋಡಿ 76ರನ್ಗಳ ಜತೆಯಾಟವಾಡುವ ಮೂಲಕ ತಂಡವನ್ನು ಸುಭದ್ರ ಸ್ಥಿತಿಗೆ ತಂದು ನಿಲ್ಲಿಸಿದರು. ಆದರೆ, ಅವರ ನಂತರ ಬಂದ ಆಟಗಾರರು ಹೆಚ್ಚು ಆಡಲಿಲ್ಲ. ಅಂತಿಮವಾಗಿ, ಮುಂಬೈ 8 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು.
ಆರಂಭದಿಂದಲೂ ತೊಡಕು: ಮುಂಬೈ ನೀಡಿದ್ದ ಗುರಿಯನ್ನು ಬೆನ್ನಟ್ಟಲು ಕ್ರೀಸ್ಗೆ ಇಳಿದಿದ್ದ ರಾಜಸ್ಥಾನ ಆರಂಭದಿಂದಲೂ ಎಡವುತ್ತಲೇ ಸಾಗಿತು.
ತಂಡದ ಮೊತ್ತ ಕೇವಲ 5 ರನ್ ಆಗಿದ್ದಾಗ, ರಾಹುಲ್ ಅವರ ವಿಕೆಟ್ ಕಳೆದುಕೊಂಡ ಅದು, ಆನಂತರ, ಫಾಕ್ನರ್, ಸ್ಯಾಮ್ಸನ್ ಹಾಗೂ ರಹಾನೆ ಅವರನ್ನೂ ಬೇಗನೇ ಕಳೆದುಕೊಂಡಿತು. ಆದರೆ, ಮಧ್ಯಮ ಕ್ರಮಾಂಕದ ಸ್ಟುವರ್ಟ್ ಬಿನ್ನಿ ಹೋರಾಟ ನೀಡಿದರು.
ವ್ಯಾಟ್ಸನ್ ಜೊತೆ 5ನೇ ವಿಕೆಟ್ಗೆ ಯಾಗ್ನಿಕ್ ಜೊತೆ 6ನೇ ವಿಕೆಟ್ಗೆ ಬಿನ್ನಿ ತಲಾ 30 ರನ್ ಜೊತೆಯಾಟವಾಡಿದರು.
ಆದರೆ, ಅವರಿಗೆ ಕ್ರೀಸ್ನಲ್ಲಿ ಉತ್ತಮ ಬೆಂಬಲ ದೊರೆಯಲಿಲ್ಲ. ಅಂತಿಮವಾಗಿ, ರಾಜಸ್ಥಾನ 7 ವಿಕೆಟ್ ನಷ್ಟಕ್ಕೆ 152 ರನ್ ಮಾತ್ರ ಗಳಿಸಿತು.
ಸ್ಕೋರ್ ಬೋರ್ಡ್
ಮುಂಬೈ ಇಂಡಿಯನ್ಸ್ 166/8 (20 ಓವರ್)
ಮ್ಯಾಕ್ಸ್ವೆಲ್ ಎಲ್ಬಿಡಬ್ಲ್ಯೂ ಬಿ ವ್ಯಾಟ್ಸನ್ 23(17), ಆದಿತ್ಯ ಸಿ ವ್ಯಾಟ್ಸನ್ ಬಿ ಕೂಪರ್ 59(37), ದಿನೇಶ್ ಸಿ ಸ್ಯಾಮ್ಸನ್ ಬಿ ತಂಬೆ 21(21), ರೋಹಿತ್ ಸಿ ವ್ಯಾಟ್ಸನ್ ಬಿ ಫಾಕ್ನರ್ 14(9), ಪೊಲಾರ್ಡ್ ರನೌಟ್ (ಕೂಪರ್) 17(14), ರಾಯುಡು ಸಿ ಸ್ಯಾಮ್ಸನ್ ಬಿ ವ್ಯಾಟ್ಸನ್ 7(7), ಹರ್ಭಜನ್ ಅಜೇಯ 15(7), ಜಾನ್ಸನ್ ಸಿ ಹಾಡ್ಜ್ ಬಿ ಫಾಕ್ನರ್ 2(7), ಮಾಲಿಂಗಾ ರನೌಟ್ (ವ್ಯಾಟ್ಸನ್/ಫಾಕ್ನರ್/ಯಾಗ್ನಿಕ್)ಇತರೆ 7
ವಿಕೆಟ್ ಪತನ: 1-25, 2-101, 3-108, 4-138, 5-144, 6-151, 7-164
ಬೌಲಿಂಗ್: ಚವಾಣ್ 3-0-25-0, ಫಾಕ್ನರ್ , ವ್ಯಾಟ್ಸನ್ 4-0-30-2, ಬಿನ್ನಿ 1-0-11-0, ತಂಬೆ 4-0-38-1, ಕೂಪರ್ 4-0-27-1.
ರಾಜಸ್ಥಾನ ರಾಯಲ್ಸ್: 152/7 (20 ಓವರ್)
ರಾಹುಲ್ ದ್ರಾವಿಡ್ ಸಿ ಕಾರ್ತಿಕ್ ಬಿ ಜಾನ್ಸನ್ 4 (5), ಅಜಿಂಕ್ಯ ರಹಾನೆ ಸಿ ಮಾಲಿಂಗ ಬಿ ಕುಲಕರ್ಣಿ 4 (8), ಫಾಕ್ನರ್ ಸಿ ಮ್ಯಾಕ್ಸ್ವೆಲ್ ಬಿ ಕುಲಕರ್ಣಿ 12 (13), ಸ್ಯಾಮ್ಸನ್ ಸಿ ಓಜಾ ಬಿ ಜಾನ್ಸನ್ 4 (4), ವಾಟ್ಸನ್ ಸಿ ಪೊಲಾರ್ಡ್ ಬಿ ಓಜಾ 19 (16), ಸ್ಟುವರ್ಟ್ ಬಿನ್ನಿ ಅಜೇಯ 37 (29), ಯಾಗ್ನಿಕ್ ಬೌಲ್ಡ್ ಹರ್ಭಜನ್ ಸಿಂಗ್ 10 (14), ಹಾಡ್ಜ್ ಎಲ್ಬಿಡಬ್ಲ್ಯೂ ಬಿ ಮಾಲಿಂಗ 39 (27), ಕೂಪರ್ ಅಜೇಯ 7 (4). ಇತರೆ 16.
ವಿಕೆಟ್ ಪತನ: 1-5, 2-22, 3-26, 4-28, 5-58, 6-88, 7-144.
ಬೌಲಿಂಗ್: ಜಾನ್ಸನ್ 4-0-23-2, ಕುಲಕರ್ಣಿ 4-0-21-2, ಹರ್ಭಜನ್ ಸಿಂಗ್ 4-0-29-1, ಮಾಲಿಂಗ 4-0-35-1, ಓಜಾ 4-0-36-1.
ಪರ್ಪಲ್ ಕ್ಯಾಪ್: ಬ್ರಾವೊ