ಫೈನಲ್: ಕರ್ನಾಟಕಕ್ಕೆ ಉತ್ತರ ಪ್ರದೇಶ ಎದುರಾಳಿ
ಬೆಂಗಳೂರು: ಬುಧವಾರದ ಪಂದ್ಯದಲ್ಲಿ ಮಣಿಪುರ ವಿರುದ್ಧ ದೊಡ್ಡ ಗೆಲವು ಪಡೆದ ಉತ್ತರ ಪ್ರದೇಶ, ಪಂದ್ಯಾವಳಿಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ. ಹಾಗಾಗಿ, ಗುರುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದ ವಿರುದ್ಧ ಉತ್ತರ ಪ್ರದೇಶ ಎದುರಾಳಿಯಾಗಲಿದೆ. ಈ ಪಂದ್ಯ ಸಂಜೆ 6 ಗಂಟೆಗೆ ನಗರದ ಹಾಕಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕಿಂತ ಮುನ್ನ ಪಂದ್ಯಾವಳಿಯ ಮೂರನೇ ಹಾಗೂ ನಾಲ್ಕನೇ ಸ್ಥಾನಗಳಿಗಾಗಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಹಾಗೂ ಪಂಜಾಬ್ ತಂಡಗಳು ಸೆಣೆಸಲಿವೆ.