ರಾಜ್ಯಮಟ್ಟದ ಬಾಕ್ಸಿಂಗ್
ಬೆಂಗಳೂರು: ಕರ್ನಾಟಕ ಅಮೆಚುರ್ ಬಾಕ್ಸಿಂಗ್ ಸಂಸ್ಥೆ (ಕೆಎಬಿಎ)ಜೂನ್ 27 ರಿಂದ 29ರವರೆಗೆ ಕಿರಿಯ ಹಾಗೂ ಹಿರಿಯರಬಾಕ್ಸಿಂಗ್ ಚಾಂಪಿಯನ್ಷಿಪ್ ಆಯೋಜಿಸಿದೆ. ಪುರುಷ ಹಾಗೂ ಮಹಿಳಾ ವಿಭಾಗದಈ ಪಂದ್ಯಾವಳಿ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಛಿಸುವ ಸಂಸ್ಥೆಯ ಕ್ಲಬ್ಗಳು ನೊಂದಾಯಿಸಿಕೊಳ್ಳಲು ಜೂನ್ 15ರಂದು ಕೊನೆಯ ದಿನಾಂಕವಾಗಿದೆ ಎಂದು ಕೆಎಬಿಎ ತಿಳಿಸಿದೆ.
ಮಿನರ್ವಗೆ ಜಯ
ಬೆಂಗಳೂರು: ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಿ ಡಿವಿಷನ್ ಫುಟ್ಬಾಲ್ ಪಂದ್ಯಾವಳಿಯ ಬುಧವಾರದ ಪಂದ್ಯದಲ್ಲಿ ಮಿನರ್ವ ತಂಡವು ರಾಯಲ್ಸ್ ತಂಡದ ವಿರುದ್ಧ 6-0 ಅಂತರದ ಭರ್ಜರಿ ಜಯ ಸಾಧಿಸಿದೆ. ಮಿನರ್ವ ತಂಡದ ಪರ ಶ್ರೀಧರ್ 16, 33, 53ನೇ, ರಾಜನ್ 27ನೇ, ಅಮಿತ್ 59ನೇ, ಮುಕುಲ್ 68ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಇನ್ನು ದಿನದ ಮತ್ತೊಂದು ಪಂದ್ಯದಲ್ಲಿ ಜ್ಯುಪಿಟರ್ ತಂಡವು ತಿಲಕ್ ಮೆಮೊರಿಯಲ್ ತಂಡದ ವಿರುದ್ಧ 0-2 ಅಂತರದಲ್ಲಿ ಸೋಲನುಭವಿಸಿದ್ದಾರೆ. ತಿಲಕ್ ಮೆಮೊರಿಯಲ್ ತಂಡದ ಪರ ಅಖಿಲೇಶ್ 27ನೇ ಹಾಗೂ ಮಿಲ್ಟನ್ 53ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡಕ್ಕೆ ಜಯ ತಂದುಕೊಟ್ಟರು.
ಬೆಂಗಳೂರಿನಲ್ಲಿ ಬೋಕಾ ಕ್ಲಬ್
ಬೆಂಗಳೂರು: ವಿಶ್ವ ಫುಟ್ಬಾಲ್ಗೆ ಡಿಗೊ ಮರಡೋನಾರಂತಹ ಅದ್ಭುತ ಆಟಗಾರನನ್ನು ಕೊಡುಗೆಯಾಗಿ ನೀಡಿದ್ದ ಬೋಕಾ ಜೂನಿಯರ್ಸ್ ಫುಟ್ಬಾಲ್ ಕ್ಲಬ್ ಮೊದಲ ಭಾರಿಗೆ ಭಾರತಕ್ಕೆ ಕಾಲಿಟ್ಟಿದೆ. ಈ ಕ್ಲಬ್ ತನ್ನ ಅಕಾಡೆಮಿಯನ್ನು ಬೆಂಗಳೂರಿನಲ್ಲಿ ಆರಂಭಿಸುವ ಮೂಲಕ ಭಾರತಕ್ಕೆ ಕಾಲಿಟ್ಟಿದೆ. ಅರ್ಜೆಂಟೀನಾ ಮೂಲದ ಈ ಕ್ಲಬ್ ವಿಶ್ವದಲ್ಲಿ ಯಶಸ್ವಿಯಾದ ಕ್ಲಬ್ಗಳಲ್ಲಿ ಒಂದಾಗಿದೆ. ಅಲ್ಲದೆ ಈ ಕ್ಲಬ್ನಲ್ಲಿ ಮರಡೋನಾ, ಗಬ್ರಿಯಲ್ ಬಟಸ್ಟುಟ ಮತ್ತು ಕಾರ್ಲೊಸ್ ಟೆವೆಜ್ ತರಬೇತಿ ಪಡೆದಿದ್ದರು. ಇದೇ ಮೊದಲ ಬಾರಿಗೆ ಬೋಕಾ ಕ್ಲಬ್ ವರ್ಷಪೂರ್ತಿ ನಿರಂತರವಾಗಿ ಕಾರ್ಯನಿರ್ವಯಿಸುವ ಪುಟ್ಬಾಲ್ ಅಕಾಡೆಮಿಯನ್ನು ಭಾರತದಲ್ಲಿ ಆರಂಭಿಸುತ್ತಿದೆ.