ಕರ್ನಾಟಕಕ್ಕೆ ಸೋಲು
ಭೋಪಾಲ್: ಇಲ್ಲಿನ ಐಶ್ ಭಾಗ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಹಾಕಿ ಇಂಡಿಯಾ ಸಬ್-ಜೂನಿಯರ್ ಹಾಕಿ ಪಂದ್ಯಾವಳಿಯ ಮೊದಲ ದಿನವಾದ ಮಂಗಳವಾರ ಕರ್ನಾಟಕ ಪುರುಷರ ತಂಡ ಸೋಲಿನ ಮೂಲಕ ತನ್ನ ಅಭಿಯಾನ ಆರಂಭಿಸಿದೆ.
ಮಂಗಳವಾರ ನಡೆದ ಪೂಲ್ 'ಎ' ವಿಭಾಗದ ಮೊದಲ ಪಂದ್ಯದಲ್ಲಿ, ಕರ್ನಾಟಕ ತಂಡ ಮಹಾರಾಷ್ಟ್ರ ವಿರುದ್ಧ 1-3 ಅಂತರದಲ್ಲಿ ಸೋಲು ಕಂಡಿತು.
ಮಹಾರಾಷ್ಟ್ರದ ಪರವಾಗಿ ಸುಮಿತ್ ಪ್ರಸಾದ್ ಅವರು ಪಂದ್ಯದ 2ನೇ ನಿಮಿಷದಲ್ಲೇ ಮೊದಲ ಗೋಲು ಗಳಿಸಿಕೊಟ್ಟರು. ನಂತರ, ಅವರೇ ಪಂದ್ಯದ 28ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದರು. ನಂತರ, ಪಂದ್ಯದ 55ನೇ ನಿಮಿಷದಲ್ಲಿ ಅನಿಕೇತ್ ಗೌರವ್ ಅವರು ಮಹಾರಾಷ್ಟ್ರಕ್ಕೆ ಮೂರನೇ ಗೋಲು ತಂದುಕೊಟ್ಟರು. ಕರ್ನಾಟಕ ತಂಡದ ಪರವಾಗಿ ಶಶಿ ಡುಂಗ್ ಡುಂಗ್ ಅವರು ಪಂದ್ಯದ 27ನೇ ನಿಮಿಷದಲ್ಲಿ ಗೋಲು ಗಳಿಸಿದರು.
ಒಡಿಶಾ ಪಂದ್ಯ ಡ್ರಾ: ಮಂಗಳವಾರ ನಡೆದ ಪುರುಷರ ವಿಭಾಗದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಒಡಿಶಾ ತಂಡ, ಜಾರ್ಖಂಡ್ ವಿರುದ್ಧ 4-4ರ ಸಮಬಲದಲ್ಲಿ ಡ್ರಾ ಮಾಡಿಕೊಂಡಿತು.
ಪೂಲ್ 'ಎ' ವಿಭಾಗದಲ್ಲಿ ನಡೆದ ಈ ಪಂದ್ಯದಲ್ಲಿ, ಒಡಿಶಾ ಪರವಾಗಿ ಸುಧೀರ್ ಮುಂಡು (9ನೇ ನಿಮಿಷ), ಮಹೇಂದ್ರ ಟೊಪ್ಪೊ (51ನೇ ನಿಮಿಷ), ಅಮಿತ್ (54ನೇ ನಿಮಿಷ) ಹಾಗೂ ಜೋಸೆಫ್ ನಾಗ್ (65ನೇ ನಿಮಿಷ) ಗೋಲು ಗಳಿಸಿದರು.
ಜಾರ್ಖಂಡ್ ಪರವಾಗಿ, ನಿತಿನ್ ಮುಖೇಶ್ (16ನೇ ನಿಮಿಷ) ಸುಜರ್ ಮಿಂಜ್ (40ನೇ ನಿಮಿಷ), ಅಮಿತ್ (70ನೇ ನಿಮಿಷ) ಗೋಲು ಗಳಿಸಿದರು. ಒಂದು ಸ್ವಯಂ ಗೋಲು (12ನೇ ನಿಮಿಷ) ಒಡಿಶಾಗೆ ಉಡುಗೊರೆಯಾಗಿ ಬಂತು.
ಮಹಿಳೆಯರ ವಿಭಾಗ: ಮಧ್ಯಪ್ರದೇಶ ಹಾಕಿ ಅಕಾಡೆಮಿ ಮಹಿಳಾ ತಂಡ ಮಂಗಳವಾರ ನಡೆದ ಸಬ್ಜೂನಿಯರ್ ಪುರುಷರ ಹಾಗೂ ಮಹಿಳೆಯರ ರಾಷ್ಟ್ರೀಯ ಹಾಕಿ ಚಾಂಪಿಯನ್ಷಿಪ್ನ ಉದ್ಘಾಟನಾ ಪಂದ್ಯದಲ್ಲಿ ಜಯಗಳಿಸಿದೆ. ಚಂಡೀಗಢ ತಂಡದ ವಿರುದ್ಧ ಸೆಣೆಸಿದ ಅದು ಪಂದ್ಯವನ್ನು 2-1 ಅಂತರದಲ್ಲಿ ಜಯಗಳಿಸಿತು.
ಪಂದ್ಯದ ಮೂರನೇ ನಿಮಿಷದಲ್ಲಿ ಮಧ್ಯಪ್ರದೇಶ ತಂಡದ ನೀಲೂ ತಮ್ಮ ತಂಡಕ್ಕೆ ಮೊದಲ ಗೋಲು ತಂದಿತ್ತರು. ಇದಾದ ನಂತರ, ಪ್ರೀತಿ ದುಬೆ ಅವರು ಪಂದ್ಯದ 19ನೇ ನಿಮಿಷದಲ್ಲಿ ತಮ್ಮ ತಂಡಕ್ಕೆ ಎರಡನೇ ಗೋಲು ತಂದುಕೊಟ್ಟು, 2-0 ಅಂತರದ ಮುನ್ನಡೆಯನ್ನು ಒದಗಿಸಿದರು.
ಪಂದ್ಯದ 17ನೇ ನಿಮಿಷದಲ್ಲಿ ಚಂಡೀಗಢ ತಂಡ ತನ್ನ ಗೋಲ್ನ ಖಾತೆಯನ್ನು ತೆರೆಯಿತು. ಆ ತಂಡದ ಸರೋಜ್ ಅವರು ಈ ಗೋಲು ಗಳಿಸಿಕೊಟ್ಟರು. ಆದರೆ, ಆನಂತರ, ಆ ತಂಡದ ಕಡೆಯಿಂದ ಯಾವುದೇ ಗೋಲು ದಾಖಲಾಗಲಿಲ್ಲ. ಅಂತಿಮವಾಗಿ, ಮಧ್ಯಪ್ರದೇಶ ತಂಡ 2-1 ಗೋಲುಗಳ ಅಂತರದಲ್ಲಿ ಪಂದ್ಯದಲ್ಲಿ ಜಯಗಳಿಸಿತು.
ಪೂಲ್ 'ಎ'ನಲ್ಲಿ ನಡೆದ ಮೊದಲ ಪಂದ್ಯದ ಮೊದಲ ಪಂದ್ಯ ಇದಾಗಿದ್ದು, ಈ ಪಂದ್ಯದಲ್ಲಿ ಜಯಗಳಿಸಿರುವ ಮಧ್ಯಪ್ರದೇಶ, ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದೆ.
ಆಂಧ್ರಕ್ಕೆ ಸೋಲು: ಮಂಗಳವಾರ ಪೂಲ್ 'ಬಿ' ವಿಭಾಗದಲ್ಲಿ ನಡೆದ ಪಂದ್ಯದಲ್ಲಿ ಆಂಧ್ರಪ್ರದೇಶ ತಂಡ, ಹರ್ಯಾಣ ತಂಡದ ವಿರುದ್ಧ 0-13 ಅಂತರದ ಭಾರೀ ಅಂತರದ ಸೋಲು ಕಂಡಿತು. ಹರ್ಯಾಣದ ಪರವಾಗಿ ಉದಿತಾ (1, 39ನೇ ನಿಮಿಷ), ನವಪ್ರೀತ್ ಕೌರ್ (10, 61ನೇ ನಿಮಿಷ), ರೀತ್ (17ನೇ ನಿಮಿಷ), ನವನೀತ್ ಕೌರ್ (31, 38, 57ನೇ ನಿಮಿಷ), ರೀತು (17ನೇ ನಿಮಿಷ), ಪೂಜಾ (62ನೇ ನಿಮಿಷ), ಸೋನಿಕಾ (65ನೇ ನಿಮಿಷ) ಹಾಗೂ ಮನ್ಪ್ರೀತ್ (68ನೇ ನಿಮಿಷ) ಗೋಲು ಗಳಿಸಿದರು.
ಜಾರ್ಖಂಡ್ಗೆ ಗೆಲವು: ಪೂಲ್ 'ಬಿ' ವಿಭಾಗದಲ್ಲಿ ಮತ್ತೊಂದು ನಡೆದ ಪಂದ್ಯದಲ್ಲಿ ಜಾರ್ಖಂಡ್ ತಂಡ, ಮಹಾರಾಷ್ಟ್ರ ತಂಡವನ್ನು 7-1 ಅಂತರದಲ್ಲಿ ಜಯ ಸಾಧಿಸಿತು. ಜಾರ್ಖಂಡ್ ಪರವಾಗಿ, ಕಾಂತಿ ಪ್ರಧಾನ್ (2, 26ನೇ ನಿಮಿಷ), ಪ್ರಮೀಳಾ ಸೋರಂಗ್ (8, 21ನೇ ನಿಮಿಷ), ಪ್ರಿಯಾಂಕ ಟೊಪ್ಪೊ (33ನೇ ನಿಮಿಷ), ಸುಪ್ರಿಯಾ ಮುಂಡು (50ನೇ ನಿಮಿಷ) ಗೋಲು ಗಳಿಸಿದರೆ, ಮತ್ತೊಂದು ಗೋಲು ಮಹಾರಾಷ್ಟ್ರ ತಂಡದ ಆಟಗಾರರು ಅಚಾತುರ್ಯದಿಂದ ಸ್ವಯಂ ಗೋಲು ದಾಖಲಿಸಿ, ಜಾರ್ಖಂಡ್ಗೆ ಒಂದು ಗೋಲು ಉಡುಗೊರೆಯಾಗಿ ನೀಡಿದರು.
ಮಹಾರಾಷ್ಟ್ರದ ಪರವಾಗಿ, ನಿಶಾ ರಾಣಿ (39ನೇ ನಿಮಿಷ) ಗೋಲು ಗಳಿಸಿದರು.