ಸಹವಾಸ ಸಾಕೆಂದ ಸಹಾರಾ
ಸ್ಪಾಟ್ ಫಿಕ್ಸಿಂಗ್ ಹಗರಣದಿಂದ ಬಳಲುತ್ತಿರುವ...
ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಹಗರಣದಿಂದ ಬಳಲುತ್ತಿರುವ ಐಪಿಎಲ್ಗೆ ಮಂಗಳವಾರ ಮತ್ತೊಂದು ಹಿನ್ನಡೆ ಉಂಟಾಗಿದೆ. ಸಹಾರಾ ಸಮೂಹ ಮಾಲೀಕತ್ವದ ಪುಣೆ ವಾರಿಯರ್ಸ್ ತಂಡ ಪಂದ್ಯಾವಳಿಯಿಂದ ಹಿಂದೆ ಸರಿದಿದೆ.
ತಂಡದ ಶುಲ್ಕವನ್ನು ಕಡಿಮೆ ಮಾಡುವ ಕುರಿತು ಮಾತುಕತೆ ನಡೆಸುವ ಬಗ್ಗೆ ಬಿಸಿಸಿಐ ಆಸಕ್ತಿ ತೋರದ ಹಿನ್ನೆಲೆಯಲ್ಲಿ ಪಂದ್ಯಾವಳಿಯಿಂದ ಅದು ಹಿಂದೆ ಸರಿದಿದೆಯಂತೆ. ಇದು ಬಿಸಿಸಿಐ ಫ್ರಾಂಚೈಸಿಗಳೊಂದಿಗೆ ಹಣಕಾಸಿನ ವ್ಯವಹಾರದ ವಿವಾದಗಳನ್ನು ಹೊಂದಿರುವುದನ್ನು ಬಹಿರಗಂಪಡಿಸಿದೆ.
2010ರಲ್ಲಿ ಸಹಾರಾ ಸಮೂಹ ಪುಣೆ ವಾರಿಯರ್ಸ್ ಫ್ರಾಂಚೈಸಿಯನ್ನು ರು. 1700 ಕೋಟಿಗೆ ಖರೀದಿಸಿತ್ತು. ಆದರೆ, ಬಿಸಿಸಿಐನ ವರ್ತನೆಯಿಂದ ಬೇಸತ್ತು ಈಗ ಪಂದ್ಯಾವಳಿಯಿಂದ ಹೊರನಡೆದಿದೆ. ಫ್ರಾಂಚೈಸಿ ಶುಲ್ಕವನ್ನೇ ತೆಗೆದು ಹಾಕಿದರೂ ಪಂದ್ಯಾವಳಿಗೆ ಮರಳುವುದಿಲ್ಲ ಎಂದು ಅದು ಹೇಳಿದೆ.