ಸ್ಪಾಟ್ ಫಿಕ್ಸಿಂಗ್ ಕಿಂಗ್ಪಿನ್ ಬಂಧನ
ಚೆನ್ನೈ: ಸ್ಪಾಟ್ ಫಿಕ್ಸಿಂಗ್ ಜಾಡು ಹಿಡಿದು ಹೊರಟಿರುವ ಪೊಲೀಸರು ದಿನೇ ದಿನೇ ತಮ್ಮ ತನಿಖೆಯನ್ನು ಚುರುಕುಗೊಳಿಸುತ್ತಿದ್ದು, ಈ ಪ್ರಕರಣದ ಪ್ರಮುಖ ರೂವಾರಿ ಪ್ರಶಾಂತ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಪ್ರಶಾಂತ್ಗೆ ಸೇರಿದ ಲ್ಯಾಪ್ಟಾಪ್, ಕೆಲವು ಮೊಬೈಲ್, ದಾಖಲೆಗಳು ಹಾಗೂ ಹಣವನ್ನು ವಶಪಡಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಇತರ ಮೂವರಿಗೆ ಶೋಧ ನಡೆಸಿದ್ದಾರೆ.