ಹೊಸ ತಂಡಗಳಿಗೆ ಟೆಂಡರ್ ಆಹ್ವಾನ
ನವದೆಹಲಿ: ಐ ಲೀಗ್ ಫುಟ್ಬಾಲ್ ಪಂದ್ಯಾವಳಿಗೆ ಹೊಸ ತಂಡವನ್ನು ಸೇರಿಸಲು ನಿರ್ಧರಿಸಿರುವ ಅಖಿಲ ಭಾರತ ಫುಟ್ಬಾಲ್ ಸಂಸ್ಥೆ ಮಂಗಳವಾರ ಹೊಸ ಟೆಂಡರ್ ನೊಟೀಸ್ ಆಹ್ವಾನಿಸಿದೆ.
ಈ ಬಿಡ್ಡಿಂಗ್‌ನಲ್ಲಿ ಗೆಲ್ಲುವವರು ಹೊಸ ಕ್ಲಬ್ ಅನ್ನು ಹೊಂದಿ ಕಾರ್ಯಾರಂಭ ಮಾಡಲು ಹಕ್ಕನ್ನು ಪಡೆಯಲಿದ್ದು, ಈ ತಂಡ 2013ರ ಐ ಲೀಗ್ ಪಂದ್ಯಾವಳಿಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಕೊಡಲಾಗುವುದು. ಅಲ್ಲದೆ ಈ ತಂಡಗಳು ಎಎಫ್‌ಸಿ ಕ್ಲಬ್ ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ.
ಫರ್ಗ್ಯುಸನ್‌ಗೆ ವಾರ್ಷಿಕ ಪ್ರಶಸ್ತಿ
ಲಂಡನ್: ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಮಾಜಿ ಕೋಚ್ ಸರ್ ಆ್ಯಲೆಕ್ಸ್ ಫರ್ಗುಸನ್ ಅವರಿಗೆ ಲೀಗ್ ಮ್ಯಾಲೇಜರ್ಸ್ ಅಸೋಸಿಯೇಷನ್ (ಎಲ್‌ಎಮ್‌ಎ) ವರ್ಷದ ಮ್ಯಾನೇಜರ್ ಪ್ರಶಸ್ತಿಯನ್ನು ನೀಡಿದೆ.
ನನ್ನ ಪರಿಶ್ರಮ ಈಗ ಮುಕ್ತಾಯಗೊಂಡಿದ್ದು, ನನಗೆ ಸಂತೋಷವಾಗಿದೆ ಎಂದು ಫರ್ಗುಸನ್ ತಿಳಿಸಿದ್ದಾರೆ. ಭಾನುವಾರ ಮ್ಯಾಂಚೆಸ್ಟರ್ ಹಾಗೂ ವೆಸ್ಟ್ ಬ್ರೂಮ್ ನಡುವಿನ ಪಂದ್ಯ 5-5 ಅಂತರದಲ್ಲಿ ಡ್ರಾಗೊಂಡಿತು. ಈ ಪಂದ್ಯ ಫರ್ಗುಸನ್‌ಗೆ ಯುನೈಟೆಡ್ ತಂಡದ ಪರ 1,500ನೇ ಹಾಗೂ ಅಂತಿಮ ಪಂದ್ಯವಾಗಿತ್ತು.
ಪ್ರಶಸ್ತಿ ಪಡೆದ ನಂತರ ಮಾತನಾಡಿದ ಫರ್ಗುಸನ್, ವೆಸ್ಟ್ ಬ್ರೂಮ್ ತಂಡದ ಮ್ಯಾನೇಜರ್ ಸ್ಟೀವ್ ಕ್ಲಾರ್ಕ್‌ಗೆ ಈ ಪ್ರಶಸ್ತಿ ಲಭ್ಯವಾಗಬೇಕಿತ್ತು. ಏಕೆಂದರೆ ಯುನೈಟೆಡ್ ತಂಡದ ವಿರುದ್ಧ ಯಾವುದೇ ತಂಡ 5 ಗೋಲು ದಾಖಲಿಸಿದರೆ ಈ ಪ್ರಶಸ್ತಿಗೆ ಅರ್ಹರಾಗುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.