ತಂಡಕ್ಕೆ ವೆಟ್ಟೊರಿ ಮರಳುವ ಸಾಧ್ಯತೆ
ಲೀಡ್ಸ್: ಇಂಗ್ಲೆಂಡ್ ವಿರುದ್ಧ ಸರಣಿಯನ್ನು ಸಮಬಲ ಸಾಧಿಸುವ ಉದ್ದೇಶದಿಂದ ಶುಕ್ರವಾರದಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ನ್ಯೂಜಿಲೆಂಡ್ನ ಹಿರಿಯ ಸ್ಪಿನ್ ಬೌಲರ್ ಡೇನಿಯಲ್ ವೆಟ್ಟೊರಿ ತಂಡಕ್ಕೆ ಮರಳುವ ಸಾಧ್ಯತೆಗಳು ಹೆಚ್ಚಾಗಿದೆ.
ಮೊದಲ ಪಂದ್ಯದಲ್ಲಿ ಆ್ಯಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಅವರ ಬೌಲಿಂಗ್ಗೆ ತ್ತರಿಸುವ ಮೂಲಕ ಹೀನಾಯ ಸೋಲನುಭವಿಸಿದ್ದ ಕಿವೀಸ್ ಪಡೆ ಈ ಪಂದ್ಯದಲ್ಲಿ ಗೆಲವು ಸಾಧಿಸಬೇಕಾದ ಒತ್ತಡದಲ್ಲಿದೆ.
ವೆಟ್ಟೊರಿ ಹಿಮ್ಮಡಿ ನೋವಿನ ಕಾರಣದಿಂದ ಸುಮಾರು ಒಂದು ವರ್ಷಗಳಿಂದ ಟೆಸ್ಟ್ ಕ್ರಿಕೆಟ್ ಆಡಿಲ್ಲ. ಅಲ್ಲದೆ ವೆಟ್ಟೊರಿಯವರನ್ನು ಏಕದಿನ ಸರಣಿಗೆ ಮಾತ್ರ ಆಯ್ಕೆ ಮಾಡಲಾಗಿತ್ತು.
ಮೊದಲ ಪಂದ್ಯದಲ್ಲಿ ತಂಡ ಎಡಗೈ ಸ್ಪಿನ್ನರ್ ಬ್ರೂಸ್ ಮಾರ್ಟೀನ್ ಮೀನುಖಂಡದ ಗಾಯದ ಸಮಸ್ಯೆಗೆ ಒಳಗಾಗಿದ್ದು, ವೆಟ್ಟೊರಿ ಎರಡನೇ ಪಂದ್ಯದಲ್ಲಿ ಆಡುವ ಸಾಧ್ಯತೆ ಹೆಚ್ಚಾಗಿವೆ. ಇನ್ನು ಬುಧವಾರ ತಂಡದ ಮತ್ತೊರ್ವ ಸ್ಪಿನ್ನರ್ ಡಗ್ ಬ್ರಾಸ್ವೆಲ್ ಜತೆ ನೆಟ್ಸ್ನಲ್ಲಿ ಅಭ್ಯಾಸ ನಡೆಸುವ ಮೂಲಕ ವೆಟ್ಟೊರಿ ಎರಡನೇ ಟೆಸ್ಟ್ ಪಂದ್ಯಕ್ಕೆ ತಯಾರಿ ನಡೆಸಿದ್ದಾರೆ.
ವೆಟ್ಟೊರಿ ಮತ್ತೆ ತಂಡಕ್ಕೆ ಮರಳಿದ್ದು, ಅವರೊಂದಿಗೆ ನೆಟ್ಸ್ನಲ್ಲಿ ಅಭ್ಯಾಸ ನಡೆಸುತ್ತಿರುವುದು ಹೆಚ್ಚು ಸಂತಸ ತಂದಿದೆ ಎಂದು ಕಿವೀಸ್ ವೇಗಿ ನೀಲ್ ವಾಗ್ನರ್ ತಿಳಿಸಿದ್ದಾರೆ.