ನಟರ ವಿಚಾರಣೆ ಸದ್ಯಕ್ಕಿಲ್ಲ?
ಮುಂಬೈ: ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಬಂಧಿತರಾಗಿರುವ ವಿಂದೂ ದಾರಾಸಿಂಗ್ ಅವರ ಹೇಳಿಕೆಯ ಆಧಾರದ ಮೇಲೆ ಯಾವುದೇ ಬಾಲಿವುಡ್ ನಟರಿಗೆ ಸಮನ್ಸ್ ಜಾರಿಗೊಳಿಸುವ ಚಿಂತನೆ ಪೊಲೀಸರಿಗಿಲ್ಲ ಎಂದು ಮೂಲಗಳು ತಿಳಿಸಿವೆ. ಗುರುವಾರದ ವಿಚಾರಣೆ ಸಂದರ್ಭದಲ್ಲಿ, ಮುಂಬೈ ಪೊಲೀಸರೊಂದಿಗೆ ಮಾಹಿತಿ ನೀಡಿದ್ದ ವಿಂದೂ, ಬಾಲಿವುಡ್ನ ಹೆಸರಾಂತ ನಟರ ಪರವಾಗಿ ತಾವು ಬೆಟ್ಟಿಂಗ್ ಆಡುತ್ತಿದ್ದುದಾಗಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಬಾಲಿವುಡ್ ನಟರನ್ನು ಮುಂಬೈ ಪೊಲೀಸ್ ವಿಚಾರಣೆಗೊಳಪಡಿಸಬಹುದೆಂಬ ನಿರೀಕ್ಷೆಯಿತ್ತು. ಆದರೆ, ಬಾಲಿವುಡ್ನ ಯಾವುದೇ ನಟರನ್ನು ವಿಚಾರಣೆಗೊಳಪಡಿಸುವ ವಿಚಾರ ಸದ್ಯಕ್ಕೆ ಪೊಲೀಸರ ಮುಂದಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.