ಫುಟ್ಬಾಲ್: ಮಿನರ್ವ ತಂಡಕ್ಕೆ ಜಯ
ಬೆಂಗಳೂರು: ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಿ ಡಿವಿಷನ್ ಲೀಗ್ ಪಂದ್ಯಾವಳಿಯ ಗುರುವಾರದ ಪಂದ್ಯದಲ್ಲಿ ಮಿನರ್ವ ತಂಡ ಜಯಗಳಿಸಿದೆ. ಸದರ್ನ್ ಬ್ಲೂಸ್ ವಿರುದ್ಧ ನಡೆದ ಪಂದ್ಯದಲ್ಲಿ ಮಿನರ್ವ ತಂಡ 2-3 ಅಂತರದಿಂದ ಜಯಗಳಿಸಿತು.
ಮಿನರ್ವ ಪರವಾಗಿ, ಅಮಿತ್ (21ನೇ ನಿಮಿಷ), ರೋಹಿತ್ (30ನೇ ನಿಮಿಷ) ಹಾಗೂ ರಾಜನ್ (56ನೇ ನಿಮಿಷ) ಗೋಲು ದಾಖಲಿಸಿದರೆ, ಸದರ್ನ್ ಬ್ಲೂಸ್ ಪರವಾಗಿ, ಆದಿತಿ (46ನೇ ನಿಮಿಷ), ವಿಘ್ನೇಶ್ (57ನೇ ನಿಮಿಷ) ಗೋಲು ಗಳಿಸಿದರು.
ಗುರುವಾರ ನಡೆದ ಮತ್ತೊಂದು ಪಂದ್ಯದಲ್ಲಿ, ಧರ್ಮರಾಜ ಯೂನಿಯನ್ ತಂಡ, ರೇಲ್ವೇಸ್ ವಿರುದ್ಧ 8-1 ಅಂತರದ ಅಮೋಘ ಜಯ ದಾಖಲಿಸಿತು. ಧರ್ಮರಾಜ ತಂಡದ ಪರವಾಗಿ, ಸೆಲ್ವ (28, 30, 57, 59ನೇ ನಿಮಿಷ), ಲಿಯಾನ್ (33ನೇ ನಿಮಿಷ), ಶಿವ (41, 66ನೇ ನಿಮಿಷ) ಹಾಗೂ ಈಶ್ವರ್ (43ನೇ ನಿಮಿಷ) ಗೋಲು ದಾಖಲಿಸಿದರೆ, ರೇಲ್ವೇಸ್ ಪರ (ಚಂದ್ರಶೇಖರ್ (68ನೇ ನಿಮಿಷ) ಗೋಲು ಗಳಿಸಿದರು.