ಮೂವರು ಕ್ರಿಕೆಟಿಗರೊಂದಿಗೆ ನಂಟು: ವಿಂದೂ
ನವದೆಹಲಿ/ಮುಂಬೈ: ಸ್ಪಾಟ್ ಫಿಕ್ಸಿಂಗ್ ಹಗರಣದಡಿಯಲ್ಲಿ ಬಂಧಿತನಾಗಿರುವ ಬಾಲಿವುಡ್ ನಟ ವಿಂದೂ ದಾರಾಸಿಂಗ್, ತಾನು ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಹಾಗೂ ಇತರ ಮೂವರು ಕ್ರಿಕೆಟಿಗರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುದಾಗಿ ತಿಳಿಸಿದ್ದಾರೆ. ಅಲ್ಲದೇ, ತಾವು ಬಾಲಿವುಡ್‌ನ ಹೆಸರಾಂತ ನಟರು ಹಾಗೂ ಗುರುನಾಥ್ ಪರವಾಗಿಯೇ ಬೆಟ್ಟಿಂಗ್ ಆಡುತ್ತಿರುವುದಾಗಿ ತಿಳಿಸಿದ್ದಾರೆ.
ಬಾಲಿವುಡ್‌ನ ನಟರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕ ಗುರುನಾಥ್ ಮೇಯಪ್ಪನ್ ಅವರ ಪರವಾಗಿ ತಾವು ಬೆಟ್ಟಿಂಗ್ ನಡೆಸುತ್ತಿದ್ದುದಾಗಿ ವಿಂದೂ ತಿಳಿಸಿದ್ದರೂ, ಅದರ ಬಗ್ಗೆ ಸದ್ಯಕ್ಕೆ ಯಾವುದೇ ಸಾಕ್ಷ್ಯಾಧಾರ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ, ವಿಂದೂ ಅವರು ಗುರುನಾಥ್ ಹಾಗೂ ಬಾಲಿವುಡ್‌ನ ಕೆಲ ನಟರ ಬಗ್ಗೆ ಮಾಹಿತಿ ನೀಡಿದ್ದರೂ, ಅದರ ಬಗ್ಗೆ ಸಾಕ್ಷ್ಯಾಧಾರಗಳನ್ನು ಕಲೆ ಹಾಕಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸದ್ಯಕ್ಕೆ, ವಿಂದೂ ಅವರು ಗುರುನಾಥ್ ಅವರ ಆಪ್ತರೊಂದಿಗೆ ಪದೇ ಪದೇ ದೂರವಾಣಿ ಸಂಭಾಷಣೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿವೆ ಎಂದು ಅವರು ತಿಳಿಸಿದರು.