ರಾಹುಲ್ಗಿದು ಕಡೇ ಐಪಿಎಲ್ ?
ಈ ಬಾರಿಯ ಐಪಿಎಲ್ ಬಳಿಕ ವೃತ್ತಿಪರ ಕ್ರಿಕೆಟ್ನಿಂದ...
ನವದೆಹಲಿ: ಈ ಬಾರಿಯ ಐಪಿಎಲ್ ಬಳಿಕ ವೃತ್ತಿಪರ ಕ್ರಿಕೆಟ್ನಿಂದ ದೂರ ಸರಿಯುವ ಸೂಚನೆಯನ್ನು ರಾಹುಲ್ ದ್ರಾವಿಡ್ ನೀಡಿದ್ದಾರೆ. ಸನ್ರೈಸರ್ಸ್ ತಂಡದ ವಿರುದ್ಧ ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ತಂಡ ಜಯಗಳಿಸಿದ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರಿಕೆಟ್ ಲೋಕದಲ್ಲಿ ಇನ್ನು, ಯುವ ಆಟಗಾರರಿಗೆ ಹೆಚ್ಚು ಅವಕಾಶ ನೀಡಬೇಕೆಂಬ ಇರಾದೆಯನ್ನು ವ್ಯಕ್ತಪಡಿಸಿದರು.
ಸೆ. 17ರಿಂದ ಅ. 6ರವರೆಗೆ ಭಾರತದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ತಾವು ಭಾಗವಹಿಸುತ್ತಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಚಾಂಪಿಯನ್ಸ್ ಟ್ರೋಫಿಯಲ್ಲಿ ನಾನು ಪಾಲ್ಗೊಳ್ಳುವ ಬಗ್ಗೆ ನಾನು ಈಗಲೇ ಸ್ಪಷ್ಟವಾಗಿ ಏನನ್ನೂ ಹೇಳಲಾರೆ. ಐಪಿಎಲ್, ಚಾಂಪಿಯನ್ಸ್ ಟ್ರೋಫಿ ಅಲ್ಲದೇ ಕ್ರಿಕೆಟ್ನಲ್ಲಿ ಕಾರ್ಯ ನಿರ್ವಹಿಸುವ ಇತರ ಮಾರ್ಗಗಳೂ ಇವೆ. ಮೊದಲು ಐಪಿಎಲ್ ಮುಗಿಸುತ್ತೇನೆ. ಆನಂತರ, ನನ್ನ ತಂಡದ ಫ್ರಾಂಚೈಸಿ (ರಾಜಸ್ಥಾನ ತಂಡ) ಬಳಿ ಸಮಾಲೋಚನೆ ನಡೆಸಿ, ತನ್ನ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ' ಎಂದು ಅವರು ತಿಳಿಸಿದರು.