ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸನ್‌ರೈಸರ್ಸ್ ಉತ್ತಮ ಪ್ರದರ್ಶನ

Vishwanath S
Updated On : 24 May 2013, 11:50 am

ನವದೆಹಲಿ: ತಮ್ಮ ಚೊಚ್ಚಲ ಐಪಿಎಲ್ ಪಂದ್ಯಾವಳಿಯಲ್ಲಿ ಪ್ಲೇ ಆಫ್ ಪ್ರವೇಶಿಸುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡ ಉತ್ತಮ ಪ್ರದರ್ಶನ ನೀಡಿದ್ದು, ತಂಡದ ಪ್ರದರ್ಶನದ ಬಗ್ಗೆ ನಾಯಕ ಕೆಮರೂನ್ ವೈಟ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪಂದ್ಯಾವಳಿಯಲ್ಲಿ ತಂಡದ ಅಭಿಯಾನ ಉತ್ತಮವಾಗಿದ್ದು, ಹೆಚ್ಚು ಖುಷಿ ತಂದಿದೆ ಎಂದು ತಿಳಿಸಿದ್ದಾರೆ.
ಈ ಆವೃತ್ತಿಯಲ್ಲಿ ಸನ್‌ರೈಸರ್ಸ್ ತಂಡ ಉತ್ತಮ ಪ್ರದರ್ಶನ ನೀಡಿದೆ. ನಾವು ಲೀಗ್ ಹಂತದಲ್ಲಿ 10 ಪಂದ್ಯಗಳಲ್ಲಿ ಜಯ ಸಾಧಿಸಿ, ಪ್ಲೇ ಆಫ್ ಹಂತಕ್ಕೆ ಪ್ರವೇಶ ಪಡೆದಿದ್ದೇವು. ಹೊಸ ತಂಡದಲ್ಲಿ ಹೊಸ ಆಟಗಾರರು ಸಾಂಘಿಕ ಪ್ರದರ್ಶನ ನೀಡಿ ಹೋರಾಟ ನಡೆಸಿದ್ದು, ಉತ್ತಮ ಅನುಭವ ನೀಡಿದೆ ಎಂದು ವೈಟ್ ತಿಳಿಸಿದ್ದಾರೆ. ಮುಂದಿನ ಸಾಲಿನಲ್ಲಿ ಹೊಸ ಹರಾಜು ಪ್ರಕ್ರಿಯೆ ನಡೆಯಲಿದ್ದು, ಯಾರು ತಂಡದಲ್ಲಿ ಉಳಿಯುತ್ತಾರೆ ಎಂಬುದು ತಿಳಿದಿಲ್ಲ. ಮುಂದಿನ ವರ್ಷ ಹೊಸ ಆಟಗಾರರು ತಂಡಕ್ಕೆ ಸೇರ್ಪಡೆಗೊಳ್ಳುವ ವಿಶ್ವಾಸವಿದ್ದು, ಮುಂದಿನ ಆವೃತ್ತಿಯಲ್ಲೂ ಸನ್‌ರೈಸರ್ಸ್ ತಂಡ ಬಲಿಷ್ಠ ತಂಡವಾಗಿ ಉಳಿಯಲಿದೆ ಎಂದು ತಿಳಿಸಿದರು.
ಈ ಬಾರಿ ತಂಡದಲ್ಲಿ ಬೌಲಿಂಗ್ ವಿಭಾಗ ಹೆಚ್ಚು ಯಶಸ್ಸು ಗಳಿಸಿದ್ದು, ಬ್ಯಾಟಿಂಗ್ ವಿಭಾಗದ ಹೆಚ್ಚು ಪರಿಣಾಮಕಾರಿಯಾಗಿರಲಿಲ್ಲ. ಹಾಗಾಗಿ ಕೆಲವು ಪಂದ್ಯಗಳಲ್ಲಿ ನಾವು ಹಿನ್ನಡೆ ಅನುಭವಿಸಬೇಕಾಯಿತು ಎಂದು ವೈಟ್ ತಿಳಿಸಿದ್ದಾರೆ.
ಐಪಿಎಲ್‌ನಿಂದ ಯುವ ಭಾರತೀಯ ಆಟಗಾರರು ಬೆಳಕಿಗೆ ಬರುತ್ತಿದ್ದು, ಇಂತಹ ದೊಡ್ಡಮಟ್ಟದ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಭಾರತೀಯ ಕ್ರಿಕೆಟ್‌ಗೆ ಉತ್‌ತಮ ಭವಿಷ್ಯ ದೊರೆಯಲಿದೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement