ಸ್ಪಾಟ್ ಫಿಕ್ಸಿಂಗ್ನಿಂದ ಮುಖಭಂಗ: ಸಚಿವ
ಗುರ್ಗಾವ್: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದ ತಲೆ ತಗ್ಗಿಸುವಂತಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವ ಜಿತೆಂದ್ರ ಸಿಂಗ್ ತಿಳಿಸಿದ್ದಾರೆ. ಅಲ್ಲದೆ ಕ್ರಿಕೆಟ್ ಮೇಲಿನ ನಂಬಿಕೆಯನ್ನು ಉಳಿಸಿಕೊಳ್ಳಲು ಪರಿಣಾಮಕಾರಿ ಕಾನೂನಿನ್ವಶ್ಯಕತೆ ಇದೆ ಎಂದು ತಿಳಿಸಿದ್ದಾರೆ. ಯುವ ಪೀಳಿಗೆಯವನಾಗಿ, ಕ್ರೀಡೆಯ ಅಭಿಮಾನಿಯಾಗಿ ಹಾಗೂ ದೇಶದ ಕ್ರೀಡಾ ಸಚಿವನಾಗಿ ಇದು ನಾಚಿಕೆಗೇಡಿನ ವಿಷಯವಾಗಿದೆ ಎಂದು ಜಿತೆಂದ್ರ ತಿಳಿಸಿದ್ದಾರೆ. ವ್ಯವಸ್ಥೆಯಲ್ಲಿ ಸರಿಯಾದ ಆಡಳಿತ ಯಂತ್ರ ನಿರ್ಮಾಣವಾಗಿ ಮತ್ತೆ ಈ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಇದು ಕೇವಲ ಕ್ರಿಕೆಟ್ಗೆ ಮಾತ್ರ ಸೀಮಿತವಾಗಬಾರದು ಎಂದರು.