ಹಾಕಿ: ಸೆಮೀಸ್‌ಗೆ ಹರ್ಯಾಣ
ಭೋಪಾಲ್: ಆಕ್ರಮಣಕಾರಿ ಪ್ರದರ್ಶನ ನೀಡುವ ಮೂಲಕ ಹರ್ಯಾಣ ಹಾಗೂ ಜಾರ್ಖಂಡ್ ಮಹಿಳಾ ಹಾಕಿ ತಂಡಗಳು ತಮ್ಮ ಎದುರಾಳಿಗಳನ್ನು ಸುಲಭವಾಗಿ ಮಣಿಸಿದೆ. ಈ ಮೂಲಕ ಇಲ್ಲಿನ ಸಾಯಿ ಸೆಂಟರ್‌ನಲ್ಲಿ ನಡೆಯುತ್ತಿರುವ ಹಾಕಿ ಇಂಡಿಯಾ ಸಬ್ ಜೂನಿಯರ್ ಪುರುಷ ಹಾಗೂ ಮಹಿಳಾ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ಹಂತಕ್ಕೆ ತಲುಪಿದೆ. ಹರ್ಯಾಣ ತಂಡ ಬಿ ಗುಂಪಿನಲ್ಲಿ ಜಾರ್ಖಂಡ್ ತಂಡದ ವಿರುದ್ಧ 5-1 ಅಂತರದಲ್ಲಿ ಮಣಿಸುವ ಮೂಲಕ ಸತತವಾಗಿ ಮೂರನೇ ಪಂದ್ಯದಲ್ಲಿ ಗೆಲವು ದಾಖಲಿಸಿದೆ. ಇನ್ನು ಬಿ ಗುಂಪಿನಲ್ಲಿ ಇತರೆ ತಂಡಗಳ ಗೋಲು ದಾಖಲೆಯ ಆಧಾರದ ಮೇಲೆ ಈ ಪಂದ್ಯದಲ್ಲಿ ಸೋತರೂ ಜಾರ್ಖಂಡ್ ತಂಡವು ಸೆಮಿಫೈನಲ್ ಹಂತಕ್ಕೆ ಲಗ್ಗೆ ಇಟ್ಟಿದೆ.
ಸೆಮೀಸ್‌ಗೆ ಮೋನಿಕಾ
ನವದೆಹಲಿ: ಭಾರತದ ಭರವಸೆ ತಾರೆ ಮೋನಿಕಾ ಬಾತ್ರಾ ಪೊಲೆಂಡ್‌ನಲ್ಲಿ ನಡೆಯುತ್ತಿರುವ ಜೂನಿಯರ್ ಓಪನ್ ಟೇಬಲ್ ಟೇನಿಸ್‌ನ ಬಾಲಕಿಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಮೋನಿಕಾ ತಮಗಿಂತ ಹೆಚ್ಚಿನ ರ್ಯಾಂಕ್ ಹೊಂದಿದ್ದ ಆಟಗಾರ್ತಿ ವಿರುದ್ಧ 4-2 ಅಂತರದಿಂದ ಜಯ ಕಂಡುಕೊಂಡರು. ಈ ತಿಂಗಳ ಆರಂಭದಲ್ಲಿ ನಡೆದ ಕಾಮನ್ವೆಲ್ತ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದ ಮೋನಿಕಾ, ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 3ನೇ ಶ್ರೇಯಾಂಕ ಪಡೆದಿದ್ದ ಜಪಾನ್‌ನ ಯು ಹಮಾಮೋತೊ ಅವರನ್ನು 9-11, 11-9, 11-7, 10-12, 11-3, 12-10 ಅಂತರದಿಂದ ಸೋಲಿಸಿದರು.