ಇಂಗ್ಲೆಂಡ್ನಲ್ಲಿ ವಿಶ್ವಕಪ್: ಐಸಿಸಿ ಅಂಕಿತ
ಲಂಡನ್: 2019ರಲ್ಲಿ ಇಂಗ್ಲೆಂಡ್ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಂಕಿತ ಹಾಕಿದೆ. 2006ರಲ್ಲೇ 12 ಆವೃತ್ತಿಯ ವಿಶ್ವಕಪ್ನ ಆತಿಥ್ಯ ಇಂಗ್ಲೆಂಡ್ಗೆ ನೀಡಲಾಗುವುದೆಂದು ಘೋಷಣೆ ಮಾಡಲಾಗಿತ್ತು. ಈಗ, ಇದಕ್ಕೆ ಐಸಿಸಿ ಅಂಕಿತ ಹಾಕಿದೆ. ಪಂದ್ಯಾವಳಿ ಆಯೋಜನೆಗೆ ಸಂಬಂಧಿಸಿದಂತೆ, ಐಸಿಸಿ ಅಧಿಕಾರಿಗಳು ಹಾಗೂ ಇಂಗ್ಲೆಂಡ್ - ವೇಲ್ಸ್ ಕ್ರಿಕೆಟ್ ಸಂಸ್ಥೆ (ಇಸಿಬಿ) ಅಧಿಕಾರಿಗಳ ನಡುವೆ ಸಭೆಯ ನಂತರ, ಐಸಿಸಿ ಪಂದ್ಯಾವಳಿಗೆ ಹಸಿರು ನಿಶಾನೆ ತೋರಿದೆ.