ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಒಲಿಂಪಿಕ್ಸ್ ನಲ್ಲಿ ಸ್ಕ್ವಾಷ್: ಐಒಸಿ ಮನವೊಲಿಕೆಗೆ ನಿಯೋಗ

Rashmi Kasaragodu
Updated On : 28 May 2013, 12:32 pm

ಸೇಂಟ್ ಪೀಟರ್ಸ್ಬರ್ಗ್: 2020ರ ಒಲಿಂಪಿಕ್ಸ್ನಲ್ಲಿ ಸ್ಕ್ವಾಷ್ ಪಂದ್ಯವನ್ನು ಒಂದು ಕ್ರೀಡಾವಿಭಾಗವನ್ನಾಗಿ ಪರಿಗಣಿಸುವಂತೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ(ಐಒಸಿ)ಯನ್ನು ಕೋರುವ ಉದ್ದೇಶದಿಂದ ವಿಶ್ವಮಟ್ಟದ ಸ್ಕ್ವಾಷ್ ಆಟಗಾರರ ನಿಯೋಗವೊಂದು ಇಲ್ಲಿಗೆ ಸೋಮವಾರ ಬಂದಿಳಿದಿದೆ. ಈ ತಂಡದಲ್ಲಿ, ವಿಶ್ವದ ನಂಬರ್ಒನ್ ಆಟಗಾರರಿದ್ದಾರೆ. ಪುರುಷರ ವಿಭಾಗದಲ್ಲಿ ವಿಶ್ವದ ನಂಬರ್ಒನ್ ಆಟಗಾರರಾದ ರ್ಯಾಮಿ ಅಶೌರ್ ಹಾಗೂ ಮಹಿಳೆಯರ ವಿಭಾಗದ ನಂಬರ್ಒನ್ ಆಟಗಾರ್ತಿಯಾದ ನಿಕೋಲ್ ಡೇವಿಡ್ ಅವರು ನಿಯೋಗದಲ್ಲಿದ್ದಾರೆ. ಪ್ರಸ್ತುತ ಒಲಿಂಪಿಕ್ಸ್ನಲ್ಲಿರುವ ಕ್ರೀಡಾವಿಭಾಗಗಳಲ್ಲಿ ಎಂಟು ವಿಭಾಗಗಳನ್ನು ತೆಗೆದುಹಾಕಿ ಆ ಜಾಗಗಳಿಗೆ ಹೊಸದಾಗಿ ಎಂಟು ಕ್ರೀಡೆಗಳನ್ನು ಸೇರಿಸಲು ಐಒಸಿ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ, ಮೇ. 29ರಂದು ಹೊಸ ಕ್ರೀಡೆಗಳ ಸೇರ್ಪಡೆಗಾಗಿ ವಿಚಾರ ಸಂಕಿರಣವೊಂದನ್ನು ಏರ್ಪಡಿಸಿದೆ. ಈ ಹಿನ್ನೆಲೆಯಲ್ಲಿ, ವಿವಿಧ ಕ್ರೀಡಾ ನಿಯೋಗಗಳು ಒಲಿಂಪಿಕ್ಸ್ನಲ್ಲಿ ಸ್ಥಾನ ಪಡೆಯುವ ಉದ್ದೇಶದಿಂದ ಇಲ್ಲಿಗೆ ಆಗಮಿಸಲಿವೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement