ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕಿವೀಸ್ ವಿರುದ್ಧ ಕ್ಲೀನ್‌ಸ್ವೀಪ್

Vishwanath S
Updated On : 29 May 2013, 12:09 pm

ಲೀಡ್ಸ್: ನ್ಯೂಜಿಲೆಂಡ್ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಗೆಲವು ಸಾಧಿಸಿದ ಇಂಗ್ಲೆಂಡ್ ತಂಡ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ ಕೀವಿಸ್ ತಂಡವನ್ನು ಬಗ್ಗುಬಡಿಯಿತು.
ಪಂದ್ಯದ ನಾಲ್ಕನೇ ದಿನಾಂತ್ಯಕ್ಕೆ 158 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸೋಲಿನ ಸನಿಹದಲ್ಲಿದ್ದ ನ್ಯೂಜಿಲೆಂಡ್ ತಂಡ ಐದನೇ ದಿನ ತಮ್ಮ ಆಟ ಆರಂಭಿಸಿತು. ಮೊದಲ ಅವಧಿಯಲ್ಲಿ ಕಿವೀಸ್ ತಂಡ 61 ರನ್‌ಗಳಿಸಿ 2 ವಿಕೆಟ್ ಕಳೆದುಕೊಂಡಿತು. ನಂತರ ಊಟದ ವಿರಾಮದ ನಂತರ ಪಂದ್ಯಕ್ಕೆ ಮಳೆಯ ಅಡ್ಡಿ ಆರಂಭವಾಯಿತು. ನಂತರ ಸತತವಾಗಿ ಸುರಿದ ಮಳೆಯ ಕಾರಣ ಪಂದ್ಯ ಕೆಲ ಕಾಲ ನಿಲ್ಲಿಸಲಾಗಿತ್ತು. ನಂತರ ಮಳೆ ನಿಂತ ಹಿನ್ನೆಲೆಯಲ್ಲಿ ಪಂದ್ಯ ಸ್ಥಳೀಯ ಕಾಲಮಾನ ಮಧ್ಯಾಹ್ನ 3ಗಂಟೆಗೆ ಆರಂಭವಾಯಿತು. ನಂತರ ತಮ್ಮ ಉಳಿದ 2 ವಿಕೆಟ್ ಕಳೆದು ಕೊಂಡ ನ್ಯೂಜಿಲೆಂಡ್ ತಂಡ 247 ರನ್‌ಗಳ ಹೀನಾಯ ಸೋಲನುಭವಿಸಿತು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ ಮೊದಲ ಇನಿಂಗ್ಸ್ 354
ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 174
ಇಂಗ್ಲೆಂಡ್ 2ನೇ ಇನಿಂಗ್ಸ್ 287/5 (ಡಿ)
ನ್ಯೂಜಿಲೆಂಡ್ 2ನೇ ಇನಿಂಗ್ಸ್ 220
ರಾಸ್ ಟೇಲರ್ 70,
ರುದರ್‌ಫೋರ್ಡ್  42
ಬೌಲಿಂಗ್: ಸ್ವಾನ್ 90/6, ಬ್ರಾಡ್ 26/2

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement