ಸೋಲಿನ ಸನಿಹದಲ್ಲಿ ಕಿವೀಸ್ ತಂಡ
ಲೀಡ್ಸ್: ದ್ವಿತೀಯ ಇನಿಂಗ್ಸ್ನಲ್ಲಿ ನಾಯಕ ಅಲಸ್ಟೇರ್ ಕುಕ್ ಅವರ ಶತಕ ಹಾಗೂ ಜೊನಾಥನ್ ಟ್ರಾಟ್ ಅರ್ಧಶತಕದ ನೆರವಿನಿಂದ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ತಂಡಕ್ಕೆ ಬೃಹತ್ ಸವಾಲು ನೀಡಿದ್ದು, ಕಿವೀಸ್ ತಂಡ ದ್ವಿತೀಯ ಇನಿಂಗ್ಸ್ನಲ್ಲಿ ಆರಂಭಿಕ ಕುಸಿತ ಕಾಣುವ ಮೂಲಕ ಸೋಲಿನ ಸನಿಹದಲ್ಲಿದೆ.
ನ್ಯೂಜಿಲೆಂಡ್ ತಂಡವನ್ನು ಮೊದಲ ಇನಿಂಗ್ಸ್ನಲ್ಲಿ 174 ರನ್ಗಳಿಗೆ ಕಟ್ಟಿಹಾಕಿ ತಮ್ಮ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಂಗ್ಲರು, 287 ರನ್ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವುದರ ಜತೆಗೆ 468 ರನ್ಗಳ ಗುರಿ ನೀಡಿತು. ಇಂಗ್ಲೆಂಡ್ ತಂಡದ ಪರ ನಾಯಕ ಕುಕ್ 130 ರನ್ಗಳಿಸುವ ಮೂಲಕ ತಂಡ ಬೃಹತ್ ಮುನ್ನಡೆ ಸಾಧಿಸಲು ಕಾರಣವಾಯಿತು. ಇವರಿಗೆ ಉತ್ತಮ ಸಾಥ್ ನೀಡಿದ ಟ್ರಾಟ್ 76 ರನ್ಗಳಿಸಿದರು.
ಇಂಗ್ಲೆಂಡ್ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟಿದ ಕಿವೀಸ್ ಪಡೆ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ 57 ರನ್ಗಳಿಸಿ 2 ವಿಕೆಟ್ ಕಳೆದುಕೊಂಡು ಆರಂಭಿಕ ಕುಸಿತ ಕಂಡಿದೆ. ಆರಂಭಿಕರಾಗಿ ಕಣಕ್ಕಿಳಿದ ಪುಲ್ಟಾನ್ ಕೇವಲ 5 ರನ್ಗಳಿಸಿ ಒಟಾದರೆ, ನಂತರ ಬಂದ ವಿಲಿಯಮ್ಸನ್ ಕೇವಲ 3 ರನ್ಗಳಿಸಿ ಔಟಾದರು.
ಈ ವೇಳೆ ರುದರ್ಫೋರ್ಡ್ ಅಜೇಯ 35 ಹಾಗೂ ರಾಸ್ ಟೇಲರ್ ಅಜೇಯ 8 ರನ್ಗಳಿಸಿ ಕ್ರೀಸ್ನಲ್ಲಿದ್ದರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ ಮೊದಲ ಇನಿಂಗ್ಸ್ 354
ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 174
ಇಂಗ್ಲೆಂಡ್ ಎರಡನೇ ಇನಿಂಗ್ಸ್ 287/5 (ಡಿಕ್ಲೇರ್)
ಕುಕ್ 130
ಟ್ರಾಟ್ 76
ಬೌಲಿಂಗ್: ವಿಲಿಯಮ್ಸನ್ 68/3, ವಾಂಗ್ನರ್ 67/2
ನ್ಯೂಜಿಲೆಂಡ್ ಎರಡನೇ ಇನಿಂಗ್ಸ್ 57/2
ರುದರ್ಫೋರ್ಡ್ ಅಜೇಯ 35
ರಾಸ್ ಟೇಲರ್ ಅಜೇಯ 8
ಬೌಲಿಂಗ್: ಸ್ವಾನ್ 14/1, ಬ್ರಾಡ್ 18/1