ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

2ನೇ ಸುತ್ತಿಗೆ ಮಾರಿಯಾ ಶರಪೊವಾ

ಹಾಲಿ ಚಾಂಪಿಯನ್ ಮಾರಿಯಾ ಶರಪೊವಾ ಅವರು, ಫ್ರೆಂಚ್ ಓಪನ್‌ನ ದ್ವಿತೀಯ ಸುತ್ತನ್ನು ಪ್ರವೇಶಿಸಿದ್ದಾರೆ...

Vishwanath S
Updated On : 29 May 2013, 12:07 pm

ಪ್ಯಾರಿಸ್: ಹಾಲಿ ಚಾಂಪಿಯನ್ ಮಾರಿಯಾ ಶರಪೊವಾ ಅವರು, ಫ್ರೆಂಚ್ ಓಪನ್‌ನ ದ್ವಿತೀಯ ಸುತ್ತನ್ನು ಪ್ರವೇಶಿಸಿದ್ದಾರೆ. ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು, ತೈವಾನ್‌ನ ಹ್ಸೇಯ್ ಸು-ವೈ ವಿರುದ್ಧ 6-2, 6-1 ಅಂತರದ ಗೆಲವನ್ನು ಸಾಧಿಸಿದರು.
ಪಂದ್ಯಾವಳಿಯಲ್ಲಿ ದ್ವಿತೀಯ ಶ್ರೇಯಾಂಕ ಪಡೆದಿರುವ ರಷ್ಯಾದ ಮಾರಿಯಾ ಶರಪೊವಾ, ಅವರು ತೀರಾ ಗಡಿಬಿಡಿಯಲ್ಲಿ ಪಂದ್ಯವನ್ನು ಮುಗಿಸಿದಂತೆ ಕಂಡಿತು. ಅವರ ಪಂದ್ಯ ಸುಝಾನ್ನೆ ಲೆಗ್ಲೆನ್ ಕ್ರೀಡಾಂಗಣಕ್ಕೆ ವರ್ಗಾವಣೆಯಾಗಿತ್ತು. ಇದರಿಂದ ಕೊಂಚ ಗಲಿಬಿಲಿಗೊಂಡಂತೆ ಕಂಡುಬಂದ ಮಾರಿಯಾ, ಪಂದ್ಯಕ್ಕೂ ಮುನ್ನ ಕೊಂಚ ಬೆದರಿದಂತೆ ಕಂಡುಬಂದರು. ಆದರೆ, ಪಂದ್ಯದಲ್ಲಿ ಮಾತ್ರ ಆ ಗಲಿಬಿಲಿ, ಗೊಂದಲಗಳೇನೂ ಪ್ರತಿಫಲನಗೊಳ್ಳಲಿಲ್ಲ. ಆರಂಭದಿಂದಲೂ ಉತ್ತಮವಾಗಿ ಆಡಿದ ಅವರು, ಎದುರಾಳಿ ವಿರುದ್ಧ ನಿಮಿಷಗಳಲ್ಲೇ ಹಿಡಿತ ಸಾಧಿಸಿದರು.
ಅತ್ತ, ಸು-ವೈ ಕೂಡಾ ಉತ್ತಮ ಹೋರಾಟ ತೋರಿದರಾದರೂ, ಮೊದಲ ಸೆಟ್‌ನಲ್ಲಿ ಅವರ ಆಟ ನಡೆಯಲಿಲ್ಲ. ಉತ್ತಮ ಸರ್ವ್‌ಗಳಿಂದ ಅಂಕಗಳನ್ನು ಪೇರಿಸುತ್ತಾ ಸಾಗಿದ ಶರಪೊವಾ, ಮೊದಲ ಸೆಟ್‌ನಲ್ಲಿ 6-2 ಅಂತರದ ಸುಲಭ ಜಯ ದಾಖಲಿಸಿದರು. ಇನ್ನು, ಎರಡನೇ ಸೆಟ್‌ನಲ್ಲೂ ಶರಪೊವಾ ಅವರ ಕೈ ಮೇಲಾಯಿತು. ಇಲ್ಲಿಯೂ ಸು-ವೈ ಹೋರಾಟ ತೋರಲೇ ಇಲ್ಲ. ಹೀಗಾಗಿ, ಶರಪೊವಾ ಅವರು ಅನಾಯಾಸವಾಗಿ ಈ ಸೆಟ್‌ನಲ್ಲಿ 6-1 ಅಂತರದಲ್ಲಿ ಜಯ ಸಾಧಿಸುವುದರೊಂದಿಗೆ ಪಂದ್ಯವನ್ನೂ ಗೆದ್ದುಕೊಂಡರು.
ಅತ್ತ, ಐದನೇ ಬಾರಿಗೆ ಫ್ರೆಂಚ್ ಓಪನ್ ಪಂದ್ಯಾವಳಿಗೆ ಕಾಲಿಟ್ಟಿದ್ದ ಸು-ವೈ ಮೊದಲ ಸುತ್ತಿನಲ್ಲೇ ಸೋತಿದ್ದಾರೆ. ಈ ಹಿಂದಿನ ನಾಲ್ಕು ಆವೃತ್ತಿಗಳಲ್ಲೂ ಅವರು ಮೊದಲ ಪಂದ್ಯದಲ್ಲೇ ಸೋತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement