ಆರ್ಬಿಐ ಪಂದ್ಯ ಡ್ರಾ
ಬೆಂಗಳೂರು: ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಿ ಡಿವಿಷನ್ ಫುಟ್ಬಾಲ್ ಪಂದ್ಯಾವಳಿಯ ಮಂಗಳವಾರದ ಪಂದ್ಯದಲ್ಲಿ ಆರ್ಬಿಐ ತಂಡ ಧರ್ಮರಾಜ್ ಯೂನಿಯನ್ ತಂಡದ ವಿರುದ್ಧ 1-1 ಗೋಲುಗಳ ಅಂತರದಲ್ಲಿ ಡ್ರಾ ಸಾಧಿಸಿತು.
ಆರ್ಬಿಐ ತಂಡದ ಪರ ಕ್ಲಿಂಟನ್ ಪಂದ್ಯದ 30ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು ನಂತರ ಧರ್ಮರಾಜ್ ಯೂನಿಯನ್ ತಂಡದ ಪರ ಲೆಯಾನ್ 48ನೇ ನಿಮಿಷದಲ್ಲಿ ಗೋಲು ದಾಖಲಿಸಿ ಅಂತರವನ್ನು ಸಮನಾಗಿಸಿದರು.