ಒಲಿಂಪಿಕ್ಸ್ ಕುಸ್ತಿ ಮುಂದುವರಿಕೆ; ಇಂದು ಅಂತಿಮ ನಿರ್ಧಾರ
ನವದೆಹಲಿ: ಮುಂದಿನ ಒಲಿಂಪಿಕ್ಸ್ನಲ್ಲಿ ಕುಸ್ತಿ ಕ್ರೀಡೆ ಮುಂದುವರೆಯಲಿದೆ ಎಂಬ ಆಶಾಭಾವನೆಯೊಂದಿಗೆ ಭಾರತೀಯ ಕುಸ್ತಿಪಟುಗಳು ಬುಧವಾರ ನಡೆಯಲಿರುವ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ (ಐಒಸಿ) ಸಭೆಯ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ. ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಈ ಸಭೆ ನಡೆಯಲಿದೆ. ಮುಂದಿನ ಒಲಿಂಪಿಕ್ಸ್ನಲ್ಲಿ ಎಂಟು ಹಳೆಯ ಕ್ರೀಡೆಗಳನ್ನು ಕೈಬಿಡಲು ಐಒಸಿ, ಇತ್ತೀಚೆಗೆ ನಿರ್ಧರಿಸಿತ್ತು. ಅದರಲ್ಲಿ ಕುಸ್ತಿಯೂ ಸಹ ಒಂದು. ಈ ಹಿನ್ನೆಲೆಯಲ್ಲಿ, ಕುಸ್ತಿಯನ್ನು ಉಳಿಸಿಕೊಳ್ಳಬೇಕೆಂದು, ಕೆಲ ದೇಶಗಳು ಆಗ್ರಹಿಸಿದ್ದವು. ಈ ಹಿನ್ನೆಲೆಯಲ್ಲಿ, ಅಂತಿಮ ನಿರ್ಧಾರ ಕೈಗೊಳ್ಳುವ ಸಲುವಾಗಿ ಬುಧವಾರ ಸಭೆಯನ್ನು ನಿಗದಿಗೊಳಿಸಲಾಗಿದೆ.