ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಫಿಕ್ಸಿಂಗ್ ತನಿಖೆಗೆ ಕರ್ನಾಟಕ ನಿ. ನ್ಯಾಯಮೂರ್ತಿ

Rashmi Kasaragodu
Updated On : 29 May 2013, 12:08 pm

ನವದೆಹಲಿ: ಫಿಕ್ಸಿಂಗ್ ಹಗರಣದ ತನಿಖೆಯನ್ನು ತಾನೇ ನಡೆಸುವುದಾಗಿ ಘೋಷಿಸಿದ್ದ ಬಿಸಿಸಿಐ, ಮಂಗಳವಾರ ಈ ಸಂಬಂಧ ಮೂವರು ಸದಸ್ಯರುಳ್ಳ ತನಿಖಾ ಆಯೋಗವನ್ನು ರಚಿಸಿದೆ. ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಟಿ. ಜಯರಾಂ ಚೌಟಾ ಅವರು ಒಬ್ಬರಾಗಿದ್ದಾರೆ.
ಇವರೊಂದಿಗೆ ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್. ಬಾಲಸುಬ್ರಮಣ್ಯನ್ ಹಾಗೂ ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆ ಅವರಿದ್ದಾರೆ. ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡಿರುವ ಬಿಸಿಸಿಐ, ಹೊಸದಾಗಿ ರಚಿಸಲ್ಪಟ್ಟಿರುವ ನಿಯೋಗ, ಸ್ಪಾಟ್ ಫಿಕ್ಸಿಂಗ್ ಬಗ್ಗೆ ಸಮಗ್ರ ತನಿಖೆ ನಡೆಸಲಿದ್ದು, ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರು ಹಾಗೂ ಸಿಎಸ್‌ಕೆ ತಂಡದ ಮುಖಸ್ಥರಾಗಿದ್ದ ಗುರುನಾಥ್ ಬಗ್ಗೆಯೂ ತನಿಖೆ ನಡೆಸುತ್ತದೆ ಎಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement