ಮದುವೆಗೆ ಅಡ್ಡಿಯಾದ ಫಿಕ್ಸಿಂಗ್ ನಂಟು
ನವದೆಹಲಿ: ಫಿಕ್ಸಿಂಗ್ ಹಗರಣದಡಿ ವಿಚಾರಣೆ ಎದುರಿಸುತ್ತಿರುವ ಅಂಕಿತ್ ಚವ್ಹಾಣ್ ಅವರ ಜಾಮೀನು ಅರ್ಜಿ ವಜಾಗೊಂಡಿದೆ. ಜೂ. 2ರಂದು ಅವರ ಮದುವೆ ನಿಶ್ಚಯವಾಗಿರುವ ಹಿನ್ನೆಲೆಯಲ್ಲಿ, ಮದುವೆಗೆ ಹೋಗಲು ಅನುಕೂಲ ಮಾಡಿಕೊಡುವಂತೆ ಕೋರಿ ಅಂಕಿತ್ ಅವರ ವಕೀಲ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ತಮಗೆ ಜಾಮೀನು ಸಿಗದಿದ್ದಲ್ಲಿ ಮದುವೆ ರದ್ದಾಗುತ್ತದೆ. ಇದರಿಂದ, ತಮ್ಮ ಘನತೆಗೆ ಧಕ್ಕೆಯಾಗುತ್ತದೆ ಎಂದು ಅಂಕಿತ್, ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದರು. ಆದರೆ, ಈ ಬಗ್ಗೆ ವಿಚಾರಣೆ ನಡೆಸಿದ ಮೆಟ್ರೋ ಪಾಲಿಟನ್ ಮ್ಯಾಜಿಸ್ಟ್ರೇಟ್ ಲೋಕೇಶ್ ಕುಮಾರ್ ಶರ್ಮಾ, ಅಂಕಿತ್ ಅವರ ವಾದವನ್ನು ತಳ್ಳಿಹಾಕಿದರು.