ರಾಷ್ಟ್ರೀಯ ಹಾಕಿ: ರೇಲ್ವೇಸ್, ಉತ್ತರ ಪ್ರದೇಶ ಶುಭಾರಂಭ
ಪುಣೆ: ರೇಲ್ವೇಸ್, ಉತ್ತರ ಪ್ರದೇಶ ಹಾಗೂ ಏರ್ ಇಂಡಿಯಾ ತಂಡಗಳು ಮಂಗಳವಾರ ಇಲ್ಲಿ ಆರಂಭಗೊಂಡ 3ನೇ ರಾಷ್ಟ್ರೀಯ (ಹಿರಿಯರ) ಹಾಕಿ ಪಂದ್ಯಾವಳಿಯಲ್ಲಿ ಜಯ ಶುಭಾರಂಭ ಮಾಡಿವೆ. ರೇಲ್ವೇಸ್ ತಂಡ, ಜಮ್ಮು-ಕಾಶ್ಮೀರ ತಂಡವನ್ನು 20-1 ಗೋಲುಗಳ ಭಾರೀ ಅಂತರದಿಂದ ಸೋಲಿಸಿತು. ಎರಡನೇ ಪಂದ್ಯದಲ್ಲಿ, ಉತ್ತರ ಪ್ರದೇಶ ತಂಡ, ಮುಂಬೈ ತಂಡವನ್ನು 2-1 ಅಂತರದಲ್ಲಿ ಸೋಲಿಸಿತು. ಇನ್ನು, ಏರ್ ಇಂಡಿಯಾ ತಂಡ, ಪುದುಚ್ಚೇರಿ ತಂಡವನ್ನು 11-2 ಅಂತರದಲ್ಲಿ ಪರಾಭವಗೊಳಿಸಿತು. ಮೊದಲ ದಿನ ನಡೆದ ಮತ್ತಿತರ ಪಂದ್ಯಗಳಲ್ಲಿ, ಚಂಡೀಗಢ, ಮಧ್ಯಪ್ರದೇಶ ಹಾಗೂ ಭೋಪಾಲ್ ತಂಡಗಳು ಜಯಗಳಿಸಿದವು. ಚಂಡೀಗಢ ತಂಡ, ರಾಜಸ್ಥಾನ ತಂಡವನ್ನು 18-0 ಅಂತರದಲ್ಲಿ ಪರಾಭವಗೊಳಿಸಿದರೆ, ಮಧ್ಯಪ್ರದೇಶ ತಂಡ, ತ್ರಿಪುರಾ ತಂಡವನ್ನು 16-1 ಅಂತರದಲ್ಲಿ ಸೋಲಿಸಿತು. ಮತ್ತೊಂದು ಪಂದ್ಯದಲ್ಲಿ, ಭೋಪಾಲ್ ತಂಡ ಸಶಸ್ತ್ರ ಸೀಮಾ ಬಲ ತಂಡವನ್ನು 12-5 ಅಂತರದಿಂದ ಮಣಿಸಿತು