ರೈನಾ, ಇತರರ ಮೇಲೆ ಪೊಲೀಸ್ ಸಂಶಯ
ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಉತ್ತರ ಪ್ರದೇಶ (ಯುಪಿ)ದ ಆಟಗಾರರು ಭಾಗಿಯಾಗಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ಅನುಮಾನ ಪಟ್ಟಿದ್ದು, ಆರ್ಸಿಬಿ ತಂಡದ ಆರ್.ಪಿ ಸಿಂಗ್ ಸೇರಿದಂತೆ ಐಪಿಎಲ್ನಲ್ಲಿ ಭಾಗವಹಿಸಿದ್ದ ಯುಪಿಯ 10 ಆಟಗಾರರ ಮೇಲೆ ಪೊಲೀಸರು ನಿಗಾವಹಿಸಿದ್ದಾರೆಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅರುಣ್ ಕುಮಾರ್, ಆರ್.ಪಿ ಸಿಂಗ್ (ಆರ್ಸಿಬಿ) ಸೇರಿದಂತೆ ಸುರೇಶ್ ರೈನಾ (ಸಿಎಸ್ಕೆ), ಭುವನೇಶ್ವರ್ ಕುಮಾರ್ (ಪುಣೆ), ಮುರ್ತಾಜಾ (ಪುಣೆ), ಪ್ರವಿಣ್ ಕುಮಾರ್ (ಪಂಜಾಬ್), ಫಿಯೂಶ್ ಚಾವ್ಲಾ (ಪಂಜಾಬ್), ಇಮ್ತಿಯಾಜ್ (ಸಿಎಸ್ಕೆ), ಅಂಕಿತ್ ಸಿಂಗ್ ರಜ್ಪೂತ್ (ಸಿಎಸ್ಕೆ), ಏಕಲವ್ಯ ದ್ವಿವೇದಿ (ಪುಣೆ) ಅವರ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದರು.