ಅಜರೆಂಕಾ ವಿಕ್ಟರಿ
ಪ್ಯಾರೀಸ್: ಆಸ್ಟ್ರೇಲಿಯಾ ಓಪನ್ ಚಾಂಪಿಯನ್ಷಿಪ್ನ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ಎನಿಸಿದ್ದ ವಿಕ್ಟೋರಿಯಾ ಅಜರೆಂಕಾ, ಫ್ರೆಂಚ್ ಓಪನ್ ಪಂದ್ಯಾವಳಿಯ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ.
ಅಜರೆಂಕಾ ಮೊದಲ ಸುತ್ತಿನ ಪಂದ್ಯದಲ್ಲಿ ರಷ್ಯಾದ ಎಲೆನಾ ವೆಸ್ನಿನಾ ಅವರನ್ನು 6-1, 6-4 ಸೋಲಿಸುವ ಮೂಲಕ ದ್ವಿತೀಯ ಸುತ್ತಿಗೆ ಪ್ರವೇಶಿಸಿದರು. ದ್ವಿತೀಯ ಸುತ್ತಿನ ಪಂದ್ಯದಲ್ಲಿ ಅಜರೆಂಕಾ 19 ವರ್ಷದ ಅನ್ನಿಕಾ ಬೆಕ್ ಅವರನ್ನು ಸೋಲಿಸಿದರು.
ಈ ಮುನ್ನ ಅಜರೆಂಕಾ ಅವರು 2009 ಮತ್ತು 2011ರಲ್ಲಿ ಪ್ಯಾರೀಸ್ನಲ್ಲಿ ಅಂತಿಮ 8ರ ಘಟ್ಟ ತಲುಪಿದ್ದೇ ದೊಡ್ಡ ಸಾಧನೆಯಾಗಿದೆ. ಆದರೆ, ವೆಸ್ನಿನಾ ವಿರುದ್ಧ ಸುಲಭವಾಗಿ ಜಯ ಸಾಧಿಸಿದ್ದನ್ನು ನೋಡಿದರೆ, ಪಂದ್ಯಾವಳಿಯಲ್ಲಿ ಅಜರೆಂಕಾ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿತ್ತು.
ಇನ್ನೊಂದು ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕ ಪಡೆದಿರುವ ಪೊಲೆಂಡ್ನ ಅಗ್ನೀಸಕ್ ರಾದ್ವಾಕ್ಸಾ ಅವರು, ಅಮೆರಿಕದ ಮಲ್ಲೋರಿ ಬರ್ಡಟ್ಟೆ ಅವರನ್ನು 6-3, 6-2 ನೇರ ಸೆಟ್ಗಳಿಂದ ಸೋಲಿಸುವ ಮೂಲಕ 4ನೇ ಸುತ್ತಿಗೆ ಪ್ರವೇಶಿಸಿದರು.
ಈಗ ಅಗ್ನೀಸಕ್ ರಾದ್ವಾಕ್ಸಾ ಅಂತಿಮ 16ರ ಘಟ್ಟ ಪ್ರವೇಶಿಸಲು, ತಮ್ಮ ಸೋದರಿ ಉರ್ಸುಜುಲಾ ಅವರನ್ನು ಎದುರಿಸಲಿದ್ದಾರೆ.